ತಾಯಿ ಗೌರಿಯೊಂದಿಗೆ ಭೂಮಿಗೆ ಆಗಮಿಸುವ ಗಣೇಶನನ್ನು ಬರಮಾಡಿಕೊಳ್ಳಲು ವಿನಾಯಕ ಚತುರ್ಥಿಯನ್ನು ಜನ ಬಹಳ ಭಕ್ತಿಯಿಂದ ಆಚರಿಸುತ್ತಾರೆ.
ಜನರು ಗಣೇಶನ ಮೂರ್ತಿಗಳನ್ನು ತಂತಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿಕೊಂಡು ಖುಷಿ ಪಡುತ್ತಾರೆ. ಆದರೆ ಈ ಬಾರಿ ಕೋವಿಡ್ ಸೋಂಕಿನ ಕಾರಣದಿಂದ ಹಬ್ಬದ ಆಚರಣೆ ಮೊದಲಿನಷ್ಟು ದೊಡ್ಡದಾಗಿಲ್ಲ.
ಮನೆಗೆ ತಂದ ತರಕಾರಿಗಳ ಪೈಕಿ ಮೆಣಸಿನಕಾಯಿಯೊಂದು ವಿನಾಯಕನ ರೂಪದಲ್ಲಿ ಇದ್ದಿದ್ದನ್ನು ಕಂಡ ಮಹಿಳೆಯೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಬಪ್ಪನ ಬಳಿ ನಿಮಗೆ ಹೋಗೋದಕ್ಕೆ ಆಗದೇ ಇದ್ದರೂ ಸಹ ಆತ ಮೆಣಸಿನಕಾಯಿ ರೂಪದಲ್ಲೆಲ್ಲಾ ಬಂದುಬಿಡುತ್ತಾನೆ…!” ಎಂದು ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ ಅನುಭಾ.