ಇಡೀ ದೇಶವೇ ಬಹಳ ವಿಧ್ಯುಕ್ತವಾಗಿ ಆಚರಿಸುವ ಹಬ್ಬವಾದ ಗಣೇಶ ಚತುರ್ಥಿಗೆ ಈ ವರ್ಷದ ಕೊರೋನಾ ವೈರಸ್‌ಅನ್ನೇ ಥೀಮ್ ಮಾಡಿಕೊಳ್ಳಲಾಗಿದ್ದು, ಕೋವಿಡ್-19 ಸಾಂಕ್ರಮಿಕದ ವಿರುದ್ಧ ಜಾಗೃತಿ ಮೂಡಿಸಲು ವಿಘ್ನೇಶ್ವರನ ವಿವಿಧ ಅವತಾರಗಳನ್ನು ಸೃಷ್ಟಿಸಲಾಗುತ್ತಿದೆ.
ಚೆನ್ನೈನ ನಂದಿನಿ ವಿಘ್ನೇಶ್ ಎಂಬ ಗೃಹಿಣಿಯೊಬ್ಬರು ತಮ್ಮ ಹಬ್ಬದ ಪ್ರಯುಕ್ತ ತಮ್ಮ ಮನೆಯನ್ನು ವಿಘ್ನೇಶ್ವರನ ಥೀಮ್‌ನಲ್ಲಿ ಸಿಂಗಾರ ಮಾಡಿದ್ದಾರೆ. ಹಬ್ಬವನ್ನು ಆಚರಿಸಲು ಗಣೇಶನ ಸಾವಿರಾರು ವಿಗ್ರಹಗಳನ್ನು ಈಕೆ ಸಂಗ್ರಹಿಸಿಟ್ಟುಕೊಂಡಿದ್ದಾರೆ.
ತಮ್ಮ ಮನೆಯಲ್ಲಿ ಈಗ ಗಣೇಶನ 3500ರಷ್ಟು ಗಣೇಶನ ವಿಗ್ರಹಗಳು ಇವೆ ಎಂದ ನಂದಿನಿ ತಿಳಿಸಿದ್ದಾರೆ. ಗಣೇಶನ ಮುಖದಲ್ಲಿ ಮಾಸ್ಕ್ ಇದ್ದು, ಜೊತೆಯಲ್ಲಿ ಸ್ಯಾನಿಟೈಸರ್ ಸಹ ಇದ್ದು, ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುತ್ತಿದ್ದಾನೆ.