ವಯಸ್ಸಾಗುತ್ತಾ ದೇಹ ದುರ್ಬಲಗೊಂಡು ಮೊದಲಿಗೆ ಕಸುವು ಮಾಸುತ್ತಾ ಸಾಗುತ್ತದೆ ಎನ್ನುವ ನಂಬಿಕೆಯನ್ನು ಸುಳ್ಳಾಗಿಸುವ ಕೆಲವೊಂದು ನಿದರ್ಶನಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಸಾಕಷ್ಟು ಕಾಣಿಸಿಕೊಂಡಿವೆ.
ಕೈಯಲ್ಲಿ ಕೋಲುಗಳನ್ನು ಹಿಡಿದು ಭರ್ಜರಿ ಯುದ್ಧಕಲೆ ತೋರಿಸಿದ ಪುಣೆಯ 85 ವರ್ಷದ ’ವಾರಿಯರ್ ಅಜ್ಜಿ’ ಎಂದೇ ಖ್ಯಾತರಾದ ಶಾಂತಾ ಪವಾರ್‌ರಿಂದ ಹಿಡಿದು, ನಾಶಿಕ್ ಬಳಿಯ ಹರಿಹರ ಕೋಟೆಯನ್ನು ತಮ್ಮ 68ರ ಇಳಿ ವಯಸ್ಸಿನಲ್ಲೂ ಏರಿ ತೋರಿದ ಆಶಾ ಅಂಬಾಡೆ ಇತ್ತೀಚೆಗೆ ಬಹಳ ಸುದ್ದಿ ಮಾಡಿದ್ದರು.
ಇದೀಗ ರಾಜೀಂದರ್ ಸಿಂಗ್ ಹೆಸರಿನ 73 ವರ್ಷದ ಸರ್ದಾರ್‌ಜೀ ಒಬ್ಬರು ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲೂ ಪ್ರತಿನಿತ್ಯ ತಮ್ಮ ಫಿಟ್ನೆಸ್ ಚಟುವಟಿಕೆಗಳನ್ನು ಎಗ್ಗಿಲ್ಲದೇ ಸಾಗಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
ಲಂಡನ್‌ನಲ್ಲಿರುವ ರಾಜೀಂದರ್ ಸಿಂಗ್‌ಗೆ ಸ್ಕಿಪ್ಪಿಂಗ್ ಅಂದ್ರೆ ಬಲೇ ಇಷ್ಟ. ನಾವೆಲ್ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (NHS) ನೆರವಿಗೆ ಬಂದಿರುವ ರಾಜೀಂದರ್ ನಿಧಿ ಸಂಗ್ರಹಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
https://www.instagram.com/p/CEUHrk3gnDG/?utm_source=ig_web_copy_link