alex Certify ಅಮ್ಮನ ಹೆಸರ‌‌ನ್ನು ಫೋನ್ ನಲ್ಲಿ ನೀವು ಏನೆಂದು ಸೇವ್ ಮಾಡಿದ್ದೀರಿ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮನ ಹೆಸರ‌‌ನ್ನು ಫೋನ್ ನಲ್ಲಿ ನೀವು ಏನೆಂದು ಸೇವ್ ಮಾಡಿದ್ದೀರಿ….?

ನವದೆಹಲಿ: ಜನ ತಮ್ಮ ಸೆಲ್ ಫೋನ್ ನಲ್ಲಿ ತಮ್ಮ ಪ್ರೀತಿ ಪಾತ್ರರ ಹಾಗೂ ಆಗದವರ ಹೆಸರನ್ನು ಚಿತ್ರ ವಿಚಿತ್ರವಾಗಿ ಸೇವ್ ಮಾಡಿರುತ್ತಾರೆ. ಅದನ್ನು ನೋಡಿದರೆ, ಕೇಳಿದರೆ, ಅಚ್ಚರಿ ಉಂಟಾಗಬಹುದು.‌ ನಗು ಉಕ್ಕಿ ಬರಬಹುದು. ಸದ್ಯ ಜಾಲತಾಣದಲ್ಲಿ ಅಂಥ ಅಪರೂಪದ ಹೆಸರು ಬಹಿರಂಗಪಡಿಸುವ ಕಾಲ ಬಂದಿದೆ.‌

ಜೆನ್ನಿಫರ್ ವರ್ತ್ ಮ್ಯಾನ್ ಎಂಬ ಮಹಿಳೆ ಜನವರಿ 31 ರಂದು ಮಾಡಿದ ಟ್ವೀಟ್ 3 ಲಕ್ಷ ವೀಕ್ಷಣೆ ಪಡೆದಿದೆ. ಅದಕ್ಕೆ ಸಾವಿರ, ಸಾವಿರ ಕಮೆಂಟ್ ಗಳು ಬರುತ್ತಿವೆ. ಅವುಗಳನ್ನು ನೋಡಿದರೆ ನಕ್ಕು ಹೊಟ್ಟೆ ಹುಣ್ಣಾಗುತ್ತದೆ.

ನಿಮ್ಮ ಮೊಬೈಲ್ ನಲ್ಲೇ ನಿಮ್ಮ ವೋಟರ್ ಐಡಿ: ಡಿಜಿಟಲ್ ಐಡಿ ಬಗ್ಗೆ ಇಲ್ಲಿದೆ ಡಿಟೇಲ್ಸ್

“ನನ್ನ ಗಂಡ ನನ್ನ ಹೆಸರನ್ನು ತನ್ನ ಫೋನ್ ನಲ್ಲಿ ಜೆನ್ನಿಫರ್ ವರ್ತ್ ಮ್ಯಾನ್ ಎಂದೇ ಸೇವ್ ಮಾಡಿದ್ದಾನೆ” ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ. ಅದಕ್ಕೆ ಒಬ್ಬ ಮಹಿಳೆ “ನನ್ನ ಮಗಳು ನನ್ನ ಹೆಸರನ್ನು ಫೋನ್ ನಲ್ಲಿ ಬರ್ತ್ ಗೀವರ್ ಎಂದು ಸೇವ್ ಮಾಡಿಕೊಂಡಿದ್ದಾಳೆ‌” ಎಂದಿದ್ದಾರೆ. ಇನ್ನೊಬ್ಬರು “ನನ್ನ ಮಗು ನನ್ನನ್ನು ಮದರ್ ಶಿಪ್ ಎಂದು ಸೇವ್ ಮಾಡಿಕೊಂಡಿದೆ” ಎಂದಿದ್ದಾರೆ.

ನನ್ನ ಮಗಳು ನನ್ನ ಹೆಸರನ್ನು ಮೊಬೈಲ್ ನಲ್ಲಿ ಮೈ ಕ್ರಿಯೇಟರ್ ಎಂದು ಸೇವ್ ಮಾಡಿಕೊಂಡಿದ್ದಾಳೆ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ನಾನು ನನ್ನ ಪತ್ನಿಯ ಹೆಸರನ್ನು ಲವ್ ಆಫ್ ಮೈ ಲೈಫ್ ಮೆಗ್ನಿಪಿಸಂಟ್ ಎಂದು ಸೇವ್ ಮಾಡಿಕೊಂಡಿದ್ದೇನೆ ಎಂದು ಇನ್ನೊಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದಾರೆ. ಈಗ ಹೇಳಿ ನೀವು ನಿಮ್ಮಮ್ಮನ ಹೆಸರನ್ನ ಏನಂತ ಸೇವ್ ಮಾಡಿಕೊಂಡಿದ್ದೀರಿ…?

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...