ತನ್ನ ಪಾಕ ಪ್ರಖರತೆಯಿಂದ ಅಂತರ್ಜಾಲದಲ್ಲಿ ಭರ್ಜರಿ ಸುದ್ದಿಯಾಗಿರುವ ಹತ್ತು ವರ್ಷದ ಬಾಲಕಿ ಸಾನ್ವಿ ಪ್ರಜೀತ್ ಒಂದೇ ಒಂದು ಗಂಟೆಯ ಅವಧಿಯಲ್ಲಿ 33 ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾಳೆ.
ತನ್ನ ಈ ಅದ್ಭುತ ಸಾಧನೆ ಮೂಲಕ ಸಾನ್ವಿ ಏಷ್ಯಾದ ದಾಖಲೆಗಳ ಪುಸ್ತಕ ಸೇರಿದ್ದಾಳೆ. ನಿಗದಿತ ಅವಧಿಯೊಳಗೆ ಅತ್ಯಂತ ಹೆಚ್ಚಿನ ಸಂಖ್ಯೆಯ ಖಾದ್ಯಗಳನ್ನು ತಯಾರಿಸಿದ ಬಾಲೆ ಎಂಬ ಶ್ರೇಯಕ್ಕೆ ಸಾನ್ವಿ ಭಾಜನಳಾಗಿದ್ದಾಳೆ.
ಸಾನ್ವಿಯ ಈ ದಾಖಲೆಯ ವಿಡಿಯೋವನ್ನು ‘Saanvi Cloud 9’ ಎಂಬ ಹೆಸರಿನ ಆಕೆಯ ಯೂಟ್ಯೂಬ್ ಚಾನೆಲ್‌ನಲ್ಲಿ ಬಿತ್ತರಿಸಲಾಗಿದೆ. ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿರುವ ಪ್ರಜಿತ್ ಬಾಬು ಸಾನ್ವಿಯ ತಂದೆ.