alex Certify ಚೆನ್ನೈನ 5 ವರ್ಷದ ಪೋರನಿಂದ ವಿಶ್ವ ದಾಖಲೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನೈನ 5 ವರ್ಷದ ಪೋರನಿಂದ ವಿಶ್ವ ದಾಖಲೆ..!

ಕಾರ್ಟೂನ್​ಗಳು ಅಂದ್ರೆ ಮಕ್ಕಳಿಗೆ ಪಂಚಪ್ರಾಣ. ಟಿವಿ ಹಚ್ಚಿದ್ರೆ ಸಾಕು ಮಕ್ಕಳ ಮೊದಲ ಆದ್ಯತೆಯೇ ಕಾರ್ಟೂನ್​ ಚಾನೆಲ್​​ಗಳು.

ಶ್ರೀಶ್​ ನಿರ್ಘವ್​​ ಎಂಬ ಹೆಸರಿನ ಬಾಲಕ ಇದೀಗ ಈ ಕಾರ್ಟೂನ್​ಗಳ ಮೂಲಕ ಗಿನ್ನೆಸ್​ ದಾಖಲೆ ನಿರ್ಮಿಸಿದ್ದಾನೆ.
ಚೆನ್ನೈನ 5 ವರ್ಷದ ಶ್ರೀಶ್​ ಕೇವಲ ಒಂದು ನಿಮಿಷದಲ್ಲಿ 50 ಕಾರ್ಟೂನ್​ ಪಾತ್ರಗಳನ್ನ ಗುರುತಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾನೆ.

ಗಿನ್ನೆಸ್​ ವರ್ಲ್ಡ್ ರೆಕಾರ್ಡ್ ತನ್ನ ಫೇಸ್​ಬುಕ್​ ಖಾತೆಯಲ್ಲಿ ಈತನ ಸಾಧನೆಯ ವಿಡಿಯೋ ಶೇರ್​ ಮಾಡಿದೆ. ಇದರಲ್ಲಿ ಬಾಲಕ ಎರಡನೇ ಯೋಚನೆಯನ್ನೂ ಮಾಡದೇ ಪಟಪಟ ಅಂತಾ ಕಾರ್ಟೂನ್​ ಗಳ ಹೆಸರನ್ನ ಹೇಳಿದ್ದಾನೆ.

ಶ್ರೀಶ್​​ದು ಇದೇ ಮೊದಲ ವಿಶ್ವ ದಾಖಲೆಯೇನಲ್ಲ. ಈ ಹಿಂದೆ ಒಂದು ನಿಮಿಷದಲ್ಲಿ ವಾಹನಗಳ ಲೋಗೋ ನೋಡಿ ಅದರ ಹೆಸರು ಹೇಳುವ ಮೂಲಕ ಗಿನ್ನೆಸ್​ ದಾಖಲೆ ಮಾಡಿದ್ದ. ಸದ್ಯ ಶ್ರೀಶ್​ನ ಈ ಸಾಧನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ಬೆಕ್ಕಸ ಬೆರಗಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...