ಒಂದು ಪ್ರದೇಶ, ಸಮುದಾಯ, ಪಂಗಡ ಎಂದ ಮೇಲೆ ಕೆಲವು ಸಾಮ್ಯತೆಗಳು ಇದ್ದೇ ಇರುತ್ತವೆ. ಇಂದಿನ ಟ್ರೆಂಡ್‌ಗೆ ನಾವೆಷ್ಟೇ ಬದಲಾದರೂ ಈ ವಿಷಯಗಳನ್ನು ಮಾತ್ರ ಬದಲಾಯಿಸಲು ಸಾಧ್ಯವಿಲ್ಲ. ಈ ರೀತಿ ಸಾಮ್ಯತೆಗಳು ಭಾರತೀಯರಾದ ನಮ್ಮಲ್ಲಿ ಕೆಲವು ಇದೆ. ಅವುಗಳ ಪಟ್ಟಿ ಇಲ್ಲಿದೆ ನೋಡಿ.
ಹೌದು, ದೇಶದಲ್ಲಿ ಇಂದಿನ ತಂತ್ರಜ್ಞಾನ ಯುಗಕ್ಕೆ ಎಷ್ಟೇ ಬದಲಾದರೂ, ಕೈಯಿಂದ ಊಟ ಮಾಡುವ ಅಭ್ಯಾಸವನ್ನು ಮಾತ್ರ ಬಿಟ್ಟಿಲ್ಲ. ಕೇವಲ ಚಪಾತಿ ರೀತಿಯ ಆಹಾರವಲ್ಲ, ಅನ್ನವನ್ನು ಕೈಯಲ್ಲೇ ತಿನ್ನುವುದು ಇನ್ನೂ ಬಿಟ್ಟಿಲ್ಲ.
ಇನ್ನು ಪರೀಕ್ಷೆಗೆ ಹೋಗುವ ಮೊದಲು ಸಿಹಿಯನ್ನು ತಿನ್ನಿಸುವುದು, ಮೊಸರು ಸಕ್ಕರೆ ತಿನ್ನುವುದು ಈಗಲೂ ನಮ್ಮ ದೇಶದಲ್ಲಿ ಹಾಸುಹೊಕ್ಕಾಗಿದೆ. ಇನ್ನು ಬರುವ ಹಲವು ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಬಗೆಹರಿಸಲು ಚಿತ್ರವಿಚಿತ್ರ ಐಡಿಯಾ ಹೊಳೆಯುವುದು ಕೂಡ ನಮ್ಮ ಮಣ್ಣಿನ ಗುಣ ಎಂದರೆ ತಪ್ಪಿಲ್ಲ.
ಇದರೊಂದಿಗೆ ಮಾರುಕಟ್ಟೆಗೆ ಹೋದಾಗ ಚೌಕಾಸಿ ವ್ಯವಹಾರಕ್ಕೆ ಇಳಿಯುವುದು, ಹೇಳಿದ ಸಮಯವನ್ನು ಗಂಟೆಗಟ್ಟಲೇ ಮುಂದಕ್ಕೆ ಹಾಕುವುದು. ಯಾವುದೇ ಪರಿಸ್ಥಿತಿ ಇದ್ದರೂ ಮದುವೆಯನ್ನು ಮಾತ್ರ ಅದ್ಧೂರಿಯಾಗಿ ಮಾಡಿಕೊಳ್ಳುವುದು. ಒಂದು ವೇಳೆ ಯಾರಾದರೂ ಅದ್ಧೂರಿ ವಿವಾಹವನ್ನು ಪ್ರಶ್ನಿಸಿದರೆ, ಆಗುವುದು ಒಂದು ಮದುವೆ ಅಲ್ಲವೇ ಎಂದು ಪ್ರಶ್ನಿಸುವುದು. ಇನ್ನು ಅಂತಿಮವಾಗಿ, ವಿಮಾನದಲ್ಲಿ ಓಡಾಡುವಾಗ ವಿಮಾನ ಲ್ಯಾಂಡ್ ಆಗಿ ನಿಲ್ಲುವಷ್ಟು ಪುರುಸೊತ್ತು ನಮ್ಮ ಜನರಿಗೆ ಇರುವುದಿಲ್ಲ.