ವರ್ಷದ ಮೊದಲ ಹಿಮಪಾತಕ್ಕೆ ಸಾಕ್ಷಿಯಾದ ಕಣಿವೆ ರಾಜ್ಯದ ನಿವಾಸಿಗಳು..! 05-01-2021 6:18AM IST / No Comments / Posted In: Latest News, India ಕಾಶ್ಮೀರ ಕಣಿವೆಯ ನಿವಾಸಿಗಳು ಭಾನುವಾರ ಭಾರೀ ಹಿಮಪಾತಕ್ಕೆ ಸಾಕ್ಷಿಯಾದರು. 2021ರ ಮೊದಲ ಹಿಮಪಾತ ಇದಾಗಿದ್ದು ಮಧ್ಯರಾತ್ರಿಯಿಂದ ಕಣಿವೆಯ ರಸ್ತೆ ತುಂಬೆಲ್ಲ ಹಿಮದ ಹೊದಿಕೆಗಳು ಬೀಳಲಾರಂಭಿಸಿದವು. ಕೂಡಲೇ ಕಾಶ್ಮೀರದ ಅಧಿಕಾರಿಗಳು ಹೆದ್ದಾರಿಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ರು. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಭಾರೀ ಹಿಮಪಾತವು ಜನವರಿ 6ರವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಕಣಿವೆಯ ಸುತ್ತ ಕಳೆದ 40 ದಿನಗಳಿಂದ ಕಠಿಣ ಚಳಿಗಾಲ ಇದೆ. ಇದನ್ನ ಸ್ಥಳೀಯ ಭಾಷೆಯಲ್ಲಿ ಚಿಲ್ಲೈ ಕಲನ್ ಎಂದು ಕರೆಯಲಾಗುತ್ತೆ. ಇದರ ಅವಧಿ ಜನವರಿ 31ಕ್ಕೆ ಕೊನೆಗೊಳ್ಳಲಿದೆ. ಹಿಮಪಾತವು ಮೇಲ್ಮೈ ಹಾಗೂ ವಾಯು ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಆದಾಗ್ಯೂ ಪ್ರವಾಸಿಗರು ತಾಜಾ ಹಿಮವನ್ನ ಆನಂದಿಸಿದರು. ಕಾಶ್ಮೀರದಲ್ಲಿ ಉಂಟಾದ ಹಿಮಪಾತದ ಸಾಕಷ್ಟು ಫೋಟೋಗಳು ವೈರಲ್ ಆಗಿವೆ.