ಸೆಕೆಂಡ್ ಹ್ಯಾಂಡ್ಗೆ ವಸ್ತುಗಳನ್ನ ಮಾರಾಟ ಮಾಡೋಕೆ ಒಎಲ್ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ವೇದಿಕೆಯನ್ನ ಕಲ್ಪಿಸಿದೆ. ಒಲ್ಎಕ್ಸ್ನಲ್ಲಿ ಅನೇಕ ಮಂದಿ ತಮಗೆ ಸೂಕ್ತವಾದ ವಸ್ತುಗಳನ್ನ ಕೊಳ್ಳುವಲ್ಲಿ ಹಾಗೂ ಮಾರುವಲ್ಲಿ ಯಶಸ್ವಿಯಾಗಿದ್ದರೆ ಇನ್ನೂ ಹಲವರು ಮೋಸಕ್ಕೆ ಒಳಗಾಗಿದ್ದಾರೆ.
ಭೋಪಾಲ್ನಲ್ಲೂ ಇಂತಹದ್ದೇ ಒಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡಬೇಕು ಎಂದುಕೊಂಡಿದ್ದ ಭೋಪಾಲ್ನ ಯುವಕನಿಗೆ ಒಎಲ್ಎಕ್ಸ್ನಲ್ಲಿ ಆತನ ಬಜೆಟ್ಗೆ ಹೊಂದುವ ಬೈಕ್ ಇರೋದನ್ನ ಕಂಡುಕೊಂಡಿದ್ದ. ಪಂಜಾಬ್ನ ವ್ಯಕ್ತಿಯೊಬ್ಬನ ಬಳಿ ಬೈಕ್ ಕೊಳ್ಳಲು 65 ಸಾವಿರ ರೂಪಾಯಿ ನೀಡೋದಾಗಿ ಹೇಳಿದ್ದ.
ಅದರಂತೆ ಭೋಪಾಲ್ನ ಯುವಕ ಪಂಜಾಬ್ ವ್ಯಕ್ತಿಗೆ 65 ಸಾವಿರ ನೀಡುತ್ತಿದ್ದಂತೆಯೇ ಆತ ಬೈಕ್ ಹಾಗೂ ಹಣದ ಸಮೇತ ಪರಾರಿಯಾಗಿದ್ದಾನೆ. ಕೂಡಲೇ ಯುವಕ ಸೈಬರ್ ಸೆಲ್ ಪೊಲೀಸರಿಗೆ ವಂಚನೆಯ ಬಗ್ಗೆ ದೂರು ನೀಡಿದ್ದಾನೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.