
ಮಥುರಾದ ಈದ್ಗಾ ಮೈದಾನದಲ್ಲಿ ಹನುಮಾನ್ ಚಾಲೀಸಾ ಓದಿದ್ದಕ್ಕಾಗಿ ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ವಾರ ಸ್ಥಳೀಯ ದೇವಾಲಯವೊಂದರಲ್ಲಿ ಇಬ್ಬರು ಕಿಡಿಗೇಡಿಗಳು ನಮಾಜ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸೌರಭ್ ಲಂಬಾರ್ದಾರ್, ಕನ್ಹಾ, ರಾಘವ್ ಮತ್ತು ಕೃಷ್ಣ ಠಾಕೂರ್ ಅವರು ಈದ್ಗಾ ಮೈದಾನದಲ್ಲಿ ಹನುಮಾನ್ ಚಾಲೀಸ್ ಪಠಿಸಿದ್ದಾರೆ.
ಕೆಲವರು ಗೋವರ್ಧನ್ ಪ್ರದೇಶದ ಈದ್ಗಾದಲ್ಲಿ ಹನುಮಾನ್ ಚಾಲಿಸಾ ಓದಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮ ಗಮನಕ್ಕೆ ಬಂತು. ಈ ಕೃತ್ಯವು ಶಾಂತಿಯನ್ನು ಉತ್ತೇಜಿಸುವ ಉದ್ದೇಶ ಎಂದು ಹೇಳಲಾಗಿದ್ದರೂ, ಅದನ್ನು ತಪ್ಪಾದ ರೀತಿಯಲ್ಲಿ ಮಾಡಲಾಗಿದೆ. ನಾಲ್ವರಿಗೆ ಸಿಆರ್‌ಪಿಸಿಯ ಸೆಕ್ಷನ್ 151 ರ ಅಡಿಯಲ್ಲಿ ಚಲನ್ ನೀಡಲಾಗಿದೆ. ಅವರ ವಿರುದ್ಧ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ನಾಲ್ವರು ಗೋವರ್ಧನ ಪ್ರದೇಶದಿಂದ ಬಂದವರು ಮತ್ತು ಯಾವುದೇ ಧಾರ್ಮಿಕ ಸಂಘಟನೆಯೊಂದಿಗೆ ಸಂಬಂಧ ಹೊಂದಿಲ್ಲ. ಅವರು ಮಂಗಳವಾರ ಬೆಳಿಗ್ಗೆ 10 ರ ಸುಮಾರಿಗೆ ಈದ್ಗಾಕ್ಕೆ ಪ್ರವೇಶಿಸಿ ಇತರ ಸ್ತೋತ್ರಗಳೊಂದಿಗೆ ಚಾಲಿಸಾವನ್ನು ಪಠಿಸಿದ್ದಾರೆ.
ಈ ಘಟನೆಯ ವಿಡಿಯೋವನ್ನು ನಂತರ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ವ್ಯಾಪಕವಾಗಿ ವೈರಲ್ ಆಗಿತ್ತು.