ನಕಲಿ ಮದ್ಯವನ್ನ ಸೇವನೆ ಮಾಡಿದ ನಾಲ್ವರು ಮದ್ಯವಸನಿಗಳು ದಾರುಣವಾಗಿ ಸಾವಿಗೀಡಾದ ಘಟನೆ ಉತ್ತರ ಪ್ರದೇಶ ಚಿತ್ರಕೂಟದಲ್ಲಿ ನಡೆದಿದೆ.
ಈ ಘಟನೆ ಬಳಿಕ ಉತ್ತರ ಪ್ರದೇಶ ಪೊಲೀಸ್ ಇಲಾಖೆ, ಬೀಟ್ ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೇಬಲ್ನ್ನು ಅಮಾನತುಗೊಳಿಸಿದೆ ಎಂದು ಇನ್ಸ್ಪೆಕ್ಟರ್ ಜನರಲ್ ಕೆ.ಸತ್ಯನಾರಾಯಣ್ ರಾವ್ ಮಾಹಿತಿ ನೀಡಿದ್ರು.
ಶನಿವಾರ ರಾತ್ರಿ ಕೆಲವರು ಮದ್ಯ ಸೇವನೆ ಮಾಡಿದ್ದಾರೆ ಹಾಗೂ ಇದರಲ್ಲಿ ಇಲ್ಲಿಯವರೆಗೆ ನಾಲ್ವರು ಸಾವಿಗೀಡಾಗಿದ್ದಾರೆ. ಮೃತರಿಗೆ ನಕಲಿ ಮದ್ಯ ಪೂರೈಕೆ ಮಾಡಿದ ಔಟ್ಲೆಟ್ ಮ್ಯಾನೇಜರ್ನ್ನು ವಶಕ್ಕೆ ಪಡೆದಿದ್ದೇವೆ. ಮಾತ್ರವಲ್ಲದೇ ಬೀಟ್ ಸಬ್ಇನ್ಸ್ಟೆಕ್ಟರ್ ಹಾಗೂ ಕಾನ್ಸ್ಟಬಲ್ರನ್ನ ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ರು.