ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರಿಗೆ ಭಾರತ ರತ್ನ ಕೊಡಬೇಕು ಎಂದು ಉತ್ತರಾಖಂಡ ಮಾಜಿ ಸಿಎಂ ಹರೀಶ್ ರಾವತ್ ಆಗ್ರಹಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯವನ್ನು ರಾವತ್ ಹಂಚಿಕೊಂಡಿದ್ದು, ನಂತರ ಪಿಟಿಐಗೂ ಹೇಳಿಕೆ ನೀಡಿದ್ದಾರೆ. ಈ ಇಬ್ಬರು ಮಹಿಳೆಯರು ಹಲವು ಭಾರತೀಯ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ ಎಂದು ರಾವತ್ ಹೇಳಿದ್ದಾರೆ.
ಸೋನಿಯಾಗಾಂಧಿ ಮಾಹಿತಿ ಹಕ್ಕು ಕಾಯ್ದೆ ಹಾಗೂ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೆ ತಂದರು. ಅವರು ಭಾರತೀಯ ನಾರಿಯರ ಗೌರವ ಹೆಚ್ಚಿಸಿದರು. ಮಾಯಾವತಿ ಉತ್ತರ ಪ್ರದೇಶದ ಸಿಎಂ ಆಗಿ ಕೋಟ್ಯಂತರ ದಲಿತ ಮಹಿಳೆಯರಿಗೆ ಪ್ರೇರಣೆಯಾದರು ಎಂದು ರಾವತ್ ಹೇಳಿದ್ದಾರೆ.