ಕೊಲೆ ಯತ್ನ ಪ್ರಕರಣದ ಕಾರಣಕ್ಕೆ ಮಾಜಿ ಕಿರಿಯ ಕುಸ್ತಿ ಚಾಂಪಿಯನ್ ಬಂಧನವಾಗಿದ್ದು, ಕಂಬಿ ಎಣಿಸುವಂತಾಗಿದೆ.
1993 ರಲ್ಲಿ ನಡೆದಿದ್ದ ಚಿಕ್ಕಪ್ಪನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ವ್ಯಕ್ತಿಯನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಮಾಜಿ ಕಿರಿಯ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಕುನಾಲ್ ಸೋಮವಾರ ಬಂಧನಕ್ಕೊಳಗಾಗಿದ್ದಾನೆ.
ಪೊಲೀಸರ ಪ್ರಕಾರ, ಪವನ್ ಮತ್ತು ಆತನ ಸಹಚರರಾದ ಸೋಂಪಾಲ್ ಮತ್ತು ಲಕ್ಷ್ಮಣ ಮೇಲೆ ಇಬ್ಬರು ಮೋಟಾರ್ ಸೈಕಲ್‌ನಲ್ಲಿ ಬಂದವರು ಗುಂಡು ಹಾರಿಸಿದ್ದರು. ಒಂದು ಗುಂಡು ಪವನ್, ಲಕ್ಷ್ಮಣ ಹೊಟ್ಟೆಗೆ ಹೊಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ತನಿಖೆಯ ವೇಳೆ ಪವನ್ ಮೂರು ಕೊಲೆ ಮತ್ತು ಒಂದು ಕೊಲೆ ಪ್ರಕರಣಗಳಲ್ಲಿ ಆರೋಪಿ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ತನಿಖೆಯ ನಂತರ ಈ ದಾಳಿಗೆ ಸಂಬಂಧಿಸಿದಂತೆ ಮಾಜಿ ಕುಸ್ತಿ ಚಾಂಪಿಯನ್ ಕುನಾಲ್ ಮತ್ತು ಆತನ ಸ್ನೇಹಿತ ನವೀನ್ ಅವರನ್ನು ಬಂಧಿಸಿದ್ದಾರೆ.
1990ರಲ್ಲಿ ಕುನಾಲ್ ಚಿಕ್ಕಪ್ಪ ಮತ್ತು ಪವನ್ ನಡುವೆ ಜಗಳ ನಡೆದಿತ್ತು.1993 ರಲ್ಲಿ ಪವನ್, ಕುನಾಲ್ ನ ಚಿಕ್ಕಪ್ಪನನ್ನು ಕೊಂದಿದ್ದಾನೆ. ಚಿಕ್ಕಪ್ಪನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಅವನು ಮತ್ತು ಅವನ ಸ್ನೇಹಿತ ನವೀನ್ ಪವನ್ ನನ್ನು ಕೊಲ್ಲಲು ಸಂಚು ಹೂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕುನಾಲ್ 2017 ರಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ.