ಸಿಬಿಐ ಮಾಜಿ ನಿರ್ದೇಶಕ, ಹಿಮಾಚಲ ಪ್ರದೇಶದ ಮಾಜಿ ಡಿಜಿಪಿ ಹಾಗೂ ಮಣಿಪುರ ಮಾಜಿ ರಾಜ್ಯಪಾಲರಾಗಿದ್ದ ಅಶ್ವಿನಿ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿಮ್ಲಾದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಿಮ್ಲಾ ಎಸ್ಪಿ ಮೋಹಿತ್ ಚಾವ್ಲಾ ತಿಳಿಸಿದ್ದಾರೆ. ಶಿಮ್ಲಾದ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಶ್ವಿನಿಕುಮಾರ್ ಮೃತದೇಹ ಪತ್ತೆಯಾಗಿದೆ.
ಆತ್ಮಹತ್ಯೆಗೆ ಕಾರಣ ತಿಳಿಸಿದ ಪತ್ರ ವಶಕ್ಕೆ ಪಡೆಯಲಾಗಿದೆ. ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. 2008 ರಲ್ಲಿ ಮತ್ತು 2013 ರಿಂದ 14 ರವರೆಗೆ ಸಿಬಿಐ ನಿರ್ದೇಶಕರಗಿ, 2013ರಲ್ಲಿ ಅಲ್ಪಾವಧಿಗೆ ಮಣಿಪುರ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. 2006 ರಿಂದ 2008ರ ವರೆಗೆ ಹಿಮಾಚಲಪ್ರದೇಶದ ಡಿಜಿಪಿಯಾಗಿದ್ದರು. ಅವರು ಸಿಬಿಐ ನಿರ್ದೇಶಕರಾಗಿದ್ದ ಅವಧಿಯಲ್ಲಿ ಸೋಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಬಂಧಿಸಲಾಗಿತ್ತು.