ತಮಿಳುನಾಡಿನ ಕೊಯಮತ್ತೂರಿನ ಬಳಿ ಗ್ರಾಮವೊಂದರಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ನರಸೀಪುರಂ ಎಂಬ ಊರಿನಲ್ಲಿ, ವೆಳ್ಳಿಯಂಗಿರಿ ಬೆಟ್ಟಗಳ ತಳದಲ್ಲಿ ಈ ಹಾವನ್ನು ರಕ್ಷಿಸಲಾಗಿದೆ.
ಪ್ಲಾಸ್ಟಿಕ್ ಡ್ರಮ್ ಹಿಂದೆ ಅವಿತುಕೊಂಡಿದ್ದ ಸರ್ಪವನ್ನು ರಕ್ಷಿಸಲು ಲೋಹದ ಹುಕ್ ಬಳಸಿ, ಅದನ್ನು ಅಲ್ಲಿಂದ ಹೊರ ತೆಗೆದು, ಬ್ಯಾಗ್ನಲ್ಲಿ ಇಟ್ಟುಕೊಂಡು ಪಕ್ಕದ ಸುರ್ವಾಣಿ ಅರಣ್ಯದಲ್ಲಿ ಬಿಡುಗಡೆ ಮಾಡಿದ್ದಾರೆ.
ಈ ಸುದ್ದಿಯನ್ನು ಎಎನ್ಐ ಸುದ್ದಿ ಸಂಸ್ಥೆ ಶೇರ್ ಮಾಡಿಕೊಂಡಿದೆ.