ಗುಪ್ತಚರ ಮಾಹಿತಿ ಮೇಲೆ ಕಾರ್ಯಪ್ರವೃತ್ತರಾದ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಂಚೀಪುರಂನ ನಿವಾಸಿ ನೂರ್ ಮೊಹಮ್ಮದ್ ಸುಲ್ತಾನ್ ಎಂಬಾತನನ್ನು ತಡೆಹಿಡಿದು ಆತ ಕೊಂಡೊಯ್ಯುತ್ತಿದ್ದ ಅಕ್ರಮ ವಿದೇಶಿ ನಗದನ್ನು ವಶಕ್ಕೆ ಪಡೆದಿದ್ದಾರೆ.
ಇಮಿಗ್ರೇಷನ್ ಕ್ಲಿಯರ್ ಮಾಡಿಕೊಂಡು ದುಬೈಗೆ ತೆರಳುತ್ತಿದ್ದ 6E-65 ವಿಮಾನವನ್ನೇರಲು ಹೊರಟಿದ್ದ ಸುಲ್ತಾನ್ ನರ್ವಸ್ ಆಗಿರುವುದನ್ನು ಕಂಡು ತಡೆಹಿಡಿದು ವಿಚಾರಣೆ ನಡೆಸಿದ ವಿಮಾನ ನಿಲ್ದಾಣದ ಅಧಿಕಾರಿಗಳು ಆತನನ್ನು ತಪಾಸಣೆಗೆ ಒಳಪಡಿಸಿದ ಬಳಿಕ 2000 ಡಾಲರ್ಗಳು ಆತನ ಜೇಬಿನಲ್ಲಿ ಇರುವುದು ಕಂಡು ಬಂದಿದೆ. ಇದರ ಮೊತ್ತ 1.45 ಲಕ್ಷ ರೂ.ಗಳಷ್ಟಾಗುತ್ತದೆ.
ಚಹಾ ಮಾಡದ ಪತ್ನಿ ಮೇಲೆ ಹಲ್ಲೆ: ಹೆಂಡತಿ ಗುಲಾಮಳಲ್ಲ ಎಂದ ಹೈಕೋರ್ಟ್ ಮಹತ್ವದ ಆದೇಶ
ಇದರ ಬೆನ್ನಿಗೇ ಆತನ ಬ್ಯಾಗೇಜ್ ಪರಿಶೀಲನೆ ನಡೆಸಿದ ಅಧಿಕಾರಿಗಳು, ಟೇಪ್ನಿಂದ ಸುತ್ತಲ್ಪಟ್ಟಿದ್ದ ಹಳೆಯ ಪುಸ್ತಕಗಳು ಕಂಡು ಬಂದಿದ್ದು, ತೆರೆದು ನೋಡಿದಾಗ ಸೌದಿ ರಿಯಾಲ್ಗಳನ್ನು ಆ ಪುಸ್ತಕದಲ್ಲಿ ಇಟ್ಟಿರುವುದು ಕಂಡು ಬಂದಿದೆ. ಆ ವೇಳೆ 357,000 ಸೌದಿ ಅರಬ್ ರಿಯಾಲ್ (68.83 ಲಕ್ಷ ರೂ.ಗಳು) ಪತ್ತೆಯಾಗಿದ್ದು, ವಿದೇಶೀ ವಿನಿಮಯ ಕಾನೂನುಗಳ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.