ವಿದ್ಯುತ್ ಸಮಸ್ಯೆ, ಟಿಸಿ ದೋಷ ಸೇರಿದಂತೆ ಹಲವು ಸಮಸ್ಯೆಯಿಂದ ಕರೆಂಟ್ ಹೋಗುವುದು ಸಾಮಾನ್ಯ. ಆದರೆ ತಮಿಳುನಾಡಿನ ಹಳ್ಳಿಯೊಂದರಲ್ಲಿ ಬರೋಬ್ಬರಿ 35 ದಿನಗಳಿಂದ ರಾತ್ರಿ ಕತ್ತಲೆಯಲ್ಲಿ ಕಳೆಯುತ್ತಿದೆ.
ಹೌದು, ಈ ರೀತಿ ತಿಂಗಳುಗಟ್ಟಲೆ ವಿದ್ಯುತ್ ಇಲ್ಲದೇ ಜೀವನ ಸಾಗಿಸಲು ಇಂಧನ ಇಲಾಖೆಯ ಸಮಸ್ಯೆಯಲ್ಲ. ಬದಲಿಗೆ ಇಂಡಿಯನ್ ರಾಬಿನ್ ಪ್ರಬೇಧದ ಹಕ್ಕಿ ಇಟ್ಟಿರುವ ಗೂಡು. ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ.
ಈ ಹಕ್ಕಿ ಗ್ರಾಮದ ಸ್ವಿಚ್ ಬೋರ್ಡ್ ಮೇಲೆ ಗೂಡು ಕಟ್ಟಿ, ಎರಡು ಮೊಟ್ಟೆಯನ್ನು ಇಟ್ಟಿದೆ. ಅವುಗಳಿಗೆ ಕಾವು ನೀಡಬೇಕಿದ್ದು ಅಲ್ಲಿವರೆಗೆ ಸ್ವಿಚ್ ಬೋರ್ಡ್ ಆನ್ ಮಾಡದೇ, ಅವುಗಳಿಗೆ ಏಕಾಂತ ಒದಗಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಮೊಟ್ಟೆಯನ್ನು ಮೊದಲು ನೋಡಿದ್ದು, ಗ್ರಾಮದ 20 ವರ್ಷದ ಕರುಪ್ಪುರಾಜ ಎನ್ನುವ ಯುವಕ. ಆತ ವಾಟ್ಸಾಪ್‌ನಲ್ಲಿ ಈ ಬಗ್ಗೆ ಚರ್ಚಿಸಿ ಒಪ್ಪಿಸಿದ್ದಾನೆ. ಬಳಿಕ ಇಡೀ ಗ್ರಾಮಸ್ಥರನ್ನು ಒಪ್ಪಿಸಿ ಕಳೆದ 35 ದಿನಗಳಿಂದ ಕರೆಂಟ್ ಇಲ್ಲದೇ ದಿನದೂಡುತ್ತಿದ್ದಾರೆ.