ಕೋವಿನ್ ಅಪ್ಲಿಕೇಶನ್ನಲ್ಲಿ 18-44 ವರ್ಷದೊಳಗಿನವರಿಗೆ ಕೊರೊನಾ ಲಸಿಕೆಗಾಗಿ ನೋಂದಣಿ ಹಾಗೂ ನೇಮಕಾತಿ ಪ್ರಕ್ರಿಯೆ ಇದೀಗ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಆದರೆ ಪ್ರಸ್ತುತ ಸರ್ಕಾರ ಲಸಿಕೆ ಕೇಂದ್ರಗಳಲ್ಲಿ ಮಾತ್ರ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದೂ ಸಚಿವಾಲಯ ಇದೇ ವೇಳೆ ತಿಳಿಸಿದೆ.
ಈ ಪ್ರಕ್ರಿಯೆಯಲ್ಲಿ ಖಾಸಗಿ ಲಸಿಕಾ ಕೇಂದ್ರಗಳು ಸದ್ಯಕ್ಕೆ ಲಭ್ಯವಿಲ್ಲ. ಹೀಗಾಗಿ ಖಾಸಗಿ ಕೇಂದ್ರಗಳು ತಮ್ಮ ಲಸಿಕಾ ವೇಳಾಪಟ್ಟಿಯ ಆನ್ಲೈನ್ ನೇಮಕಾತಿಯನ್ನ ಪ್ರತ್ಯೇಕ ಸ್ಲಾಟ್ನಲ್ಲಿ ಪ್ರಕಟಿಸಬೇಕಿದೆ.
ಲಸಿಕೆಯನ್ನ ವ್ಯರ್ಥ ಮಾಡೋದನ್ನ ಕಡಿಮೆ ಮಾಡಲು ಅರ್ಹ ಫಲಾನುಭವಿಗಳಿಗೆ ಲಸಿಕೆ ಸಿಗುತ್ತಿರೋದರ ಬಗ್ಗೆ ಖಾತ್ರಿ ಪಡಿಸಿಕೊಂಡು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು 18 ರಿಂದ 44 ವರ್ಷ ವಯಸ್ಸಿನವರಿಗೆ ಸ್ಥಳೀಯ ಪರಿಸ್ಥಿತಿಯನ್ನ ಗಮನದಲ್ಲಿರಿಸಿ ನೋಂದಣಿಗೆ ಅವಕಾಶ ನೀಡೋದ್ರ ಬಗ್ಗೆ ನಿರ್ಧರಿಸಬೇಕು ಎಂದು ಸಚಿವಾಲಯ ಹೇಳಿದೆ.
ಲಸಿಕೆ ಹಂಚಿಕೆ ವಿಚಾರವಾಗಿ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನೀಡಿದ ವರದಿಯನ್ನ ಆಧರಿಸಿ ಕೇಂದ್ರ ಆರೋಗ್ಯ ಸಚಿವಾಲಯ ಇದೀಗ ಕೋವಿನ್ ಅಪ್ಲಿಕೇಶನ್ನಲ್ಲಿ 18 ರಿಂದ 44 ವರ್ಷದವರ ಲಸಿಕೆ ನೋಂದಣಿಯನ್ನ ಸಕ್ರಿಯಗೊಳಿಸಿದೆ.