ಸಂಸತ್ ಕ್ಯಾಂಟೀನ್ ನಲ್ಲಿ ಸಿಗುವ ಆಹಾರದ ಬೆಲೆ ಇನ್ಮುಂದೆ ದುಬಾರಿಯಾಗಲಿದೆ. ಜನವರಿ 29ರಿಂದ ಬಜೆಟ್ ಕಲಾಪ ಶುರುವಾಗ್ತಿದೆ. ಈ ವೇಳೆಗೆ ಕ್ಯಾಟೀನ್ ಆಹಾರದ ಬೆಲೆಯಲ್ಲಿ ಬದಲಾವಣೆಯಾಗಿದೆ. ಕ್ಯಾಂಟೀನ್ ನಲ್ಲಿ ಸಂಸದರಿಗೆ ಸಿಗ್ತಿದ್ದ ಸಬ್ಸಿಡಿ ರದ್ದು ಮಾಡಿರುವುದಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಈಗಾಗಲೇ ತಿಳಿಸಿದ್ದರು. ಈಗ ಹೊಸ ಬೆಲೆ ಜಾರಿಗೆ ಬಂದಿದ್ದು, ಎಲ್ಲ ಆಹಾರ, ಪಾನೀಯಗಳ ಬೆಲೆ ಹೆಚ್ಚಾಗಿದೆ.
ಕ್ಯಾಂಟೀನ್ ನಲ್ಲಿ 100 ರೂಪಾಯಿಗೆ ಸಸ್ಯಹಾರಿ ಥಾಲಿ ಸಿಗಲಿದೆ. ಮಾಂಸಹಾರಿ ಊಟದ ಬೆಲೆ 700 ರೂಪಾಯಿಯಾಗಲಿದೆ. ಮೊದಲು ಸಸ್ಯಹಾರಿ ಥಾಲಿ 60 ರೂಪಾಯಿಗೆ ಸಿಗ್ತಿತ್ತು. ಮೊದಲಿನಂತೆ 5 ರೂಪಾಯಿಗೆ ಕ್ಯಾಂಟೀನ್ ನಲ್ಲಿ ಟೀ ಸಿಗಲಿದೆ. 10 ರೂಪಾಯಿಗೆ ಕಾಫಿ, 14 ರೂಪಾಯಿಗೆ ನಿಂಬು ಟೀ ಸಿಗಲಿದೆ.
ಗಡಿ ವಿಚಾರವಾಗಿ ಹೊಸ ಕ್ಯಾತೆ ತೆಗೆಯಲು ಮುಂದಾದ ‘ಮಹಾ’ ಸರ್ಕಾರ
ಕ್ಯಾಂಟೀನ್ ನಲ್ಲಿ ಅತಿ ಅಗ್ಗದ ಬೆಲೆಗೆ ರೊಟ್ಟಿ ಸಿಗಲಿದೆ. ಇದ್ರ ಬೆಲೆ ಕೇವಲ 3 ರೂಪಾಯಿಯಾಗಿರಲಿದೆ. ಚಿಕನ್ ಬಿರಿಯಾನಿ ಬೆಲೆ 100 ರೂಪಾಯಿಯಾಗಿದೆ. ಚಿಕನ್ ಕರಿ 75 ರೂಪಾಯಿಗೆ ಸಿಗಲಿದೆ. ಪ್ಲೇನ್ ದೋಸೆ 30 ರೂಪಾಯಿಯಾದ್ರೆ, ಮಟನ್ ಬಿರಿಯಾನಿ 150 ರೂಪಾಯಿಗೆ ಸಿಗಲಿದೆ. ಪೊಂಗಲ್ ಬೆಲೆ 50 ರೂಪಾಯಿಯಾಗಿದ್ರೆ ಅವಲಕ್ಕಿ ಬೆಲೆ 20 ರೂಪಾಯಿಯಾಗಿದೆ.