ದಕ್ಷಿಣ ಆಫ್ರಿಕಾದ ಪ್ರಮುಖ ಆಹಾರ ಪಾಕಶಾಸ್ತ್ರ ಸಂಬಂಧಿ ವಾಹಿನಿಯೊಂದು ಬಿರಿಯಾನಿ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ದಕ್ಷಿಣ ಏಷ್ಯಾ ಭಾಗದವರ ಬಾಯಲ್ಲಿ ನೀರೂರಿಸುವ ಬಿರಿಯಾನಿ ಮಾಡಲು ಅದರದ್ದೇ ಆದ ಕ್ರಮ, ಪದ್ಧತಿಗಳಿವೆ. ಹೇಗೆಂದರೆ ಹಾಗೆ, ಯಾವುದೆಂದರೆ ಆ ತರಕಾರಿ ಇತ್ಯಾದಿ ಏನೇನೋ ಹಾಕಿ ಬೇಯಿಸುವುದಲ್ಲ.
ಆಹಾರ ಪದ್ಧತಿಗಳ ವಿಚಾರದಲ್ಲಿ ನಾವು ಭಾರತೀಯರು ಮೊದಲೇ ಸ್ವಲ್ಪ ಭಾವುಕರು. ಈ ಪದಾರ್ಥ ನಮ್ಮ ರಾಜ್ಯದ್ದು, ದೇಸಿ ಖಾದ್ಯ ಹೀಗೆ ಹಕ್ಕು ಪ್ರತಿಪಾದಿಸುವುದುಂಟು. ಇಂತಹ ಭಾರತೀಯರು ಇಷ್ಟಪಡುವ ಬಿರಿಯಾನಿಗೆ ಸಿಕ್ಕಿದ್ದನ್ನೆಲ್ಲ ಹಾಕಿ ಮಾಡಿ ತೋರಿಸಿದ ಫುಡ್24.ಕಾಮ್ ವಾಹಿನಿಗೆ ಟ್ವಿಟ್ಟರ್ ನಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾಡಿಸಿ ಹುರಿಯದೆ ಹಾಕಿದ ತರಕಾರಿ, ಈರುಳ್ಳಿಗೆ ಆಕ್ಷೇಪಿಸಿರುವ ಬಿರಿಯಾನಿ ಪ್ರಿಯರು, ಬೇಳೆ ಹಾಕಿರುವುದಕ್ಕಂತೂ ಸಿಟ್ಟಾಗಿದ್ದಾರೆ. ಇದ್ಯಾವ ಸೀಮೆ ಬಿರಿಯಾನಿ ? ಇದು ಬಿರಿಯಾನಿ ಅಲ್ಲ. ಭಾರತೀಯರ ಭಾವನೆ ಜತೆ ಆಟ ಆಡಬೇಡಿ ಎಂದು ಎಚ್ಚರಿಸಿದ್ದಾರೆ.
ಇದರಿಂದ ದಂಗಾಗಿರುವ ಸೌತ್ ಆಫ್ರೀಕಾದ ಆಹಾರ ವಾಹಿನಿ ಕ್ಷಮೆ ಕೇಳಿದ್ದು, ನಿಮ್ಮೊಂದಿಗೆ ಬಿರಿಯಾನಿ ತಯಾರಿಸಲು ನಾವು ಇಷ್ಟಪಡುತ್ತೇವೆ ಎಂದು ಮತ್ತೊಂದು ಟ್ವೀಟ್ ಮಾಡಿದೆ. ಅಷ್ಟೇ ಅಲ್ಲದೆ, ಬಿರಿಯಾನಿ ಮಾಡುತ್ತಿರುವ ವಿಡಿಯೋ ಡಿಲೀಟ್ ಮಾಡುವ ಭರವಸೆ ನೀಡಿದೆ.
https://twitter.com/henna_rai/status/1311698698863349760?ref_src=twsrc%5Etfw%7Ctwcamp%5Etweetembed%7Ctwterm%5E1311774911321583617%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Ffood-channel-apologises-after-biryani-recipe-with-lentils-leaves-bad-taste-in-desi-mouths-2927881.html