ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನಂತ್ರ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ನಡೆಸಿದ್ರು. ಬಜೆಟ್ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ಈ ವೇಳೆ ಪತ್ರಕರ್ತೆಯೊಬ್ಬರು ಎರಡು ಪ್ರಶ್ನೆ ಕೇಳಿದ್ರು. ಆಗ ನಡೆದ ಘಟನೆ ಎಲ್ಲರ ನಗುವಿಗೆ ಕಾರಣವಾಯ್ತು.
ವಾಸ್ತವವಾಗಿ ಪತ್ರಕರ್ತೆಯೊಬ್ಬರು ನಿರ್ಮಲಾ ಸೀತಾರಾಮನ್ ಅವರಿಗೆ ಎರಡು ಪ್ರಶ್ನೆ ಕೇಳಿದ್ರು. ಆದ್ರೆ ಅಧಿಕಾರಿ ಪತ್ರಕರ್ತೆಯನ್ನು ತಡೆದ್ರು. ಆಗ ನಿರ್ಮಲಾ ಸೀತಾರಾಮನ್ ಇದನ್ನು ಪ್ರಶ್ನಿಸಿದ್ರು. ಪತ್ರಕರ್ತೆ ಎರಡು ಪ್ರಶ್ನೆ ಕೇಳೋದನ್ನು ಏಕೆ ತಡೆದ್ರಿ, ಪುರುಷರು ಪ್ರಶ್ನೆ ಕೇಳುವಾಗ ಯಾಕೆ ತಡೆಯಲಿಲ್ಲ ಎಂದ್ರು.
ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡುತ್ತ ನಿರ್ಮಲಾ ಸೀತಾರಾಮನ್, ಕೃಷಿ ಸೆಸ್ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಜನರ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲವೆಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರೈತರ ಪ್ರತಿಭಟನೆ ಬಗ್ಗೆಯೂ ಮಾತನಾಡಿದ್ದ ವಿತ್ತ ಸಚಿವೆ, ಕೃಷಿ ಸಚಿವರು ರೈತರ ಜೊತೆ ಮಾತನಾಡಿದ್ದಾರೆ. ಮೂರು ಕೃಷಿ ಕಾನೂನನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.