ಇ-ರೀಟೇಲ್ ದಿಗ್ಗಜ ಫ್ಲಿಪ್‌ಕಾರ್ಟ್ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಡಿದ ಪುಟ್ಟದೊಂದು ಪ್ರಮಾದಕ್ಕೆ ಕ್ಷಮೆ ಯಾಚಿಸಿದೆ.
ತನ್ನ ಬಿಗ್ ಬಿಲಿಯನ್ ಸೇಲ್ ಹತ್ತಿರವಾಗುತ್ತಿರುವಂತೆ ಗ್ರಾಹಕರು ಫೇಸ್ಬುಕ್‌ನಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತ ಸಾಗಿದ ಫ್ಲಿಪ್‌ಕಾರ್ಟ್, ಕೋಹಿಮಾದಿಂದ ವ್ಯಕ್ತಿಯೊಬ್ಬರು, “ನಮ್ಮ ಪ್ರದೇಶದಲ್ಲಿ ಏಕೆ ಫ್ಲಿಪ್‌ಕಾರ್ಟ್ ಸರ್ವೀಸ್ ಮಾಡುತ್ತಿಲ್ಲ” ಎಂದು ಕೇಳಿದ್ದಾರೆ. “ನಾವು ಭಾರತದ ಭಾಗವಾಗಿಯೇ ಇದ್ದರೂ ಸಹ ನಮಗೆ ಇನ್ನೂ ಸ್ವತಂತ್ರ‍್ಯ ಸಿಕ್ಕಿಲ್ಲ. ಎಲ್ಲಾ ರಾಜ್ಯಗಳನ್ನೂ ಸಮನಾಗಿ ಕಾಣಿ” ಎಂದು ಕಾಮೆಂಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ ಗ್ರಾಹಕ.
ನಾಗಾಲ್ಯಾಂಡ್‌ನ ಗ್ರಾಹಕನ ಈ ಪ್ರಶ್ನೆಗೆ ಲೊಕೇಶನ್ ’ಭಾರತದಿಂದ ಹೊರಗಿದೆ’ ಎಂದು ಕಾರಣ ನೀಡಿ ಅಲ್ಲಿಗೆ ಡೆಲಿವರಿ ಸರ್ವೀಸ್ ಮಾಡಲು ಸಾಧ್ಯವಿಲ್ಲ ಎಂದಿತ್ತು ಫ್ಲಿಪ್‌ಕಾರ್ಟ್.
ತನ್ನ ಈ ಬೇಜವಾಬ್ದಾರಿಯ ರಿಪ್ಲೈ ಅನ್ನು ಕೂಡಲೇ ಫ್ಲಿಪ್‌ಕಾರ್ಟ್ ಡಿಲೀಟ್ ಮಾಡಿದೆ. ಆದರೆ, ಅಷ್ಟರಲ್ಲಾಗಲೇ ಈ ಪ್ರತಿಕ್ರಿಯೆಯ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದ ನೆಟ್ಟಿಗರು, ದೇಶದ ಅತಿ ದೊಡ್ಡ ಇ-ಕಾಮರ್ಸ್ ರೀಟೇಲರ್‌ನ ಈ ವರ್ತನೆಯನ್ನು ಖಂಡಿಸಿದ್ದಾರೆ.