ಕೋವಿಡ್ 19 ಸಂದರ್ಭದಲ್ಲಿ ವಿಮಾನ ಪ್ರಯಾಣ ಅಪಾಯಕಾರಿ ಎಂಬ ಮಾತುಗಳು ಕೇಳಿ ಬಂದಿದ್ದವು. ಎಲ್ಲ ವಿಮಾನ ಸಂಚಾರ ನಿಲ್ಲಿಸಲಾಗಿತ್ತು. ಆದರೆ ಇತರ ಎಲ್ಲಾ ಪ್ರಯಾಣ ಮಾದರಿಗಿಂತ ವಿಮಾನ ಪ್ರಯಾಣವೇ ಸುರಕ್ಷಿತ ಎಂದು ಇದೀಗ ದೆಹಲಿ ಏಮ್ಸ್ ವೈದ್ಯರು ಹೇಳಿದ್ದಾರೆ.
ಕಡಿಮೆ ದೂರದ ವಿಮಾನ ಪ್ರಯಾಣದಲ್ಲಿ ರೋಗ ಲಕ್ಷಣವಿಲ್ಲದ ವ್ಯಕ್ತಿ ಹಾಗೂ ನೀವು ಇಬ್ಬರೂ ಮಾಸ್ಕ್ ಹಾಗೂ ಫೇಸ್ ಶೀಲ್ಡ್ ಧರಿಸಿ ಅಕ್ಕಪಕ್ಕದಲ್ಲಿ ಕುಳಿತಿದ್ದರೂ ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಇರುತ್ತದೆ ಎಂದು ವೆಬ್ ನಾರ್ ಉದ್ದೇಶಿಸಿ ಮಾತನಾಡಿದ ನವದೆಹಲಿ ವಿಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಇತರ ಮಾದರಿ ಪ್ರಯಾಣಕ್ಕೆ ಹೋಲಿಸಿದರೆ ವಿಮಾನ ಪ್ರಯಾಣ ಸುರಕ್ಷಿತ ಎಂದು ಹೇಳಿರುವ ಅವರು ಸಾಂಕ್ರಾಮಿಕ ಹರಡುತ್ತಿರುವ ಪರಿಸ್ಥಿತಿಯಲ್ಲಿ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಕೈಗೊಂಡ ಮುನ್ನೆಚ್ಚರಿಕೆ ಕ್ರಮ ಶ್ಲಾಘನೀಯ ಎಂದಿದ್ದಾರೆ.
ಕೊರೋನ ವೈರಸ್ ಏಕಾಏಕಿ ಹಬ್ಬಿದ ಬಳಿಕ ಲಾಕ್ ಡೌನ್ ಜಾರಿ ಮಾಡಿದ್ದರಿಂದ ಮಾರ್ಚ್ ನಿಂದ ವಿಮಾನಯಾನ ಸ್ಥಗಿತಗೊಳಿಸಲಾಗಿತ್ತು. ಇದೀಗ ಕೆಲವು ಷರತ್ತುಗಳೊಂದಿಗೆ ದೇಶೀಯ ವಿಮಾನಯಾನ ಆರಂಭವಾಗಿದೆ.