ಬಿಹಾರದ ಸಿವಾನ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅತ್ಯಾಚಾರ ನಡೆಸಿದ ಆರೋಪಿಗಳ ವಯಸ್ಸು ದಂಗಾಗಿಸುವಂತಿದೆ. 10 ಮತ್ತು 12 ವರ್ಷ ವಯಸ್ಸಿನ ಇಬ್ಬರು ಅಪ್ರಾಪ್ತರು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ.
11 ವರ್ಷದ ಆರೋಪಿ ಸಿವಾನ್ ನಿವಾಸಿ. 10 ವರ್ಷದ ಬಾಲಕ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಅಜ್ಜನ ಮನೆಗೆ ಬಂದಿದ್ದ ಎನ್ನಲಾಗಿದೆ. ಘಟನೆ ನಡೆದ ನಂತ್ರ ಪೀಡಿತೆ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿರುವ ವಿಷ್ಯ ಗೊತ್ತಾಗ್ತಿದ್ದಂತೆ ಆರೋಪಿಗಳಿಬ್ಬರು ಪರಾರಿಯಾಗಿದ್ದರು.
ಆರೋಪಿ ಕುಟುಂಬಸ್ಥರು ಮನೆ ಬಿಟ್ಟಿದ್ದರು ಎನ್ನಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ ನಂತ್ರ 11 ವರ್ಷದ ಆರೋಪಿ ಪೊಲೀಸ್ ಮುಂದೆ ಹಾಜರಾಗಿದ್ದ. ಆತನ ವೈದ್ಯಕೀಯ ಪರೀಕ್ಷೆ ನಡೆದಿದ್ದು, ರಕ್ತ ಪರೀಕ್ಷೆ ನಡೆಯುತ್ತಿದೆ. ಇನ್ನೊಬ್ಬ ಆರೋಪಿ ಹುಡುಕಾಟ ನಡೆದಿದೆ. ಆಟದ ನೆಪ ಹೇಳಿ ಅಪ್ರಾಪ್ತರು ಬಾಲಕಿಯನ್ನು ಕರೆದಿದ್ದರು ಎನ್ನಲಾಗಿದೆ.