ದೇಶದಲ್ಲಿ ಹಕ್ಕಿ ಜ್ವರ ಜನರಲ್ಲಿ ಭಯ ಹುಟ್ಟಿಸಿದೆ. ಇದ್ರಿಂದ ಚಿಕನ್, ಮೊಟ್ಟೆಗೆ ಬೇಡಿಕೆ ಕಡಿಮೆಯಾಗಿದೆ. ಆದ್ರೆ ಮೀನಿಗೆ ಬೇಡಿಕೆ ಹೆಚ್ಚಾಗಿದೆ. ಮೊಟ್ಟೆ, ಮಾಂಸದ ಬದಲು ಜನರು ಮೀನಿನ ಸೇವನೆ ಹೆಚ್ಚು ಮಾಡಿದ್ದಾರೆ. ಇದ್ರಿಂದಾಗಿ ಮೀನಿನ ಬೆಲೆ ಗಗನಕ್ಕೇರಿದೆ.
ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿಯೂ ಮೀನುಗಳ ಬೇಡಿಕೆ ಹೆಚ್ಚಾಗಿದೆ. ಎಲ್ಲಾ ರೀತಿಯ ಮೀನುಗಳ ಬೆಲೆಗಳು ಆಕಾಶ ಮುಟ್ಟಿದೆ. ದಿನಕ್ಕೆ 4-5 ಕ್ವಿಂಟಲ್ ಮೀನು ಮಾರಾಟವಾಗ್ತಿದ್ದ ಮಾರುಕಟ್ಟೆಯಲ್ಲಿ ಈಗ ದಿನಕ್ಕೆ 8-10 ಕ್ವಿಂಟಾಲ್ ಮೀನು ಮಾರಾಟವಾಗ್ತಿದೆ.
ಬಿಹಾರದ ಮೀನು ಮಂಡಿಗಳಲ್ಲಿ ಕರಿ ಮೀನಿನ ಬೆಲೆ ಕೆ.ಜಿ.ಗೆ 150 ರಿಂದ 200 ರೂಪಾಯಿಗೆ ಮಾರಾಟವಾಗ್ತಿದೆ. ಸಿಯೋಲ್ ಬೆಲೆ ಕೆ.ಜಿ.ಗೆ 700ರಿಂದ 850 ರೂಪಾಯಿಗೆ ಮಾರಾಟವಾಗ್ತಿದೆ. ಕಳೆದ ಒಂದು ವಾರದಲ್ಲಿ ಮೀನಿನ ಬೆಲೆ ಏರಿಕೆ ಕಂಡಿದೆ. ಉತ್ತರ ಪ್ರದೇಶದಲ್ಲೂ ಮೀನಿನ ಬೆಲೆ ಹೆಚ್ಚಾಗಿದೆ. ಮೀನು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದ್ರಿಂದ ಅನೇಕ ಪ್ರಯೋಜನವಿದೆ. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಇದ್ರಲ್ಲಿ ಹೆಚ್ಚಿನ ಅಯೋಡಿನ್ ಅಂಶವಿದೆ. ಗಂಟಲು ಹಾಗೂ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಆರೋಗ್ಯ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ. ಚಳಿಗಾಲದಲ್ಲಿ ಶೀತದಿಂದ ರಕ್ಷಣೆ ನೀಡುತ್ತದೆ.