ಖಗೋಳ ವಿಜ್ಞಾನದ ಮೇಲೆ ಆಸಕ್ತಿ ಹೊಂದಿದವರು ಇದೇ ತಿಂಗಳ 26ರಂದು ಈ ವರ್ಷದ ಮೊದಲ ರಕ್ತ ಚಂದ್ರ ಗ್ರಹಣವನ್ನ ಕಣ್ತುಂಬಿಕೊಳ್ಳಬಹುದಾಗಿದೆ.
ನಭೋಮಂಡಲದಲ್ಲಿ ಉಂಟಾಗುವ ಕೌತುಕಗಳಲ್ಲಿ ಬ್ಲಡ್ ಮೂನ್ ಕೂಡಾ ಒಂದಾಗಿದ್ದು, ಈ ವೇಳೆ ಚಂದ್ರ ತಿಳಿ ಕೆಂಪು – ಕೇಸರಿ ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಸೂರ್ಯೋದಯ ಹಾಗೂ ಸೂರ್ಯಾಸ್ತದ ಬೆಳಕು ಚಂದ್ರನ ಮೇಲೆ ಬೀಳೋದ್ರಿಂದ ಚಂದ್ರನ ಬಣ್ಣ ಬದಲಾಗಲಿದೆ. ಧೂಳಿನ ಕಣ ಹಾಗೂ ಯಾವ ತರಂಗಾತರದಲ್ಲಿ ಬೆಳಕು ಚಂದ್ರನ ಮೇಲ್ಮೈಯನ್ನ ತಲುಪಲಿದೆ ಎಂಬುದನ್ನ ಆಧರಿಸಿ ಚಂದ್ರನ ಬಣ್ಣವು ಬದಲಾಗಲಿದೆ.
ಸಂಪೂರ್ಣ ಚಂದ್ರಗ್ರಹಣ ಉಂಟಾದ ಸಂದರ್ಭದಲ್ಲಿ ಭೂಮಿಯು ಸೂರ್ಯ ಹಾಗೂ ಚಂದ್ರನ ನಡುವೆ ಬರಲಿದೆ. ಈ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳೋದನ್ನ ಭೂಮಿ ತಡೆಯುತ್ತದೆ. ಆದರೆ ಸೂರ್ಯ, ಚಂದ್ರ ಹಾಗೂ ಭೂಮಿ ಒಂದೇ ನೇರವಾಗಿ ಬಂದ ಸಂದರ್ಭದಲ್ಲಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ನಾಸಾ ನೀಡಿರುವ ಮಾಹಿತಿಯ ಪ್ರಕಾರ ಚಂದ್ರ ಗ್ರಹಣ ಅಥವಾ ಬ್ಲಡ್ ಮೂನ್ ಪ್ರಕ್ರಿಯೆಯಲ್ಲಿ ಸೂರ್ಯನ ಕಿರಣವು ಚಂದ್ರನ ಮೇಲ್ಮೈ ಮೇಲೆ ಬರದಂತೆ ಭೂಮಿಯು ತಡೆಯುತ್ತದೆ. ಈ ವಿದ್ಯಮಾನವು ಹುಣ್ಣಿಮೆ ಸಂದರ್ಭದಲ್ಲಿ ಮಾತ್ರ ಉಂಟಾಗಲಿದೆ. ನೀವು ಬರಿಗಣ್ಣಿನಿಂದ ಈ ಕೌತುಕವನ್ನ ಕಣ್ತುಂಬಿಕೊಳ್ಳಬಹುದಾಗಿದೆ.
ನಾಸಾ ನೀಡಿರುವ ಮಾಹಿತಿಯ ಪ್ರಕಾರ ಭೂಮಿಯ ವಾತಾವರಣದ ತುದಿಗಳಿಂದ ಬೆಳಕು ಭೂಮಿಯ ಮೇಲ್ಮೈ ತಲುಪಲಿದೆ. ಭೂಮಿಯ ವಾತಾವರಣದಲ್ಲಿರುವ ಗಾಳಿಯ ಅಣುಗಳು ನೀಲಿ ಬಣ್ಣವನ್ನ ಹರಡುತ್ತವೆ. ಉಳಿದ ಬೆಳಕು ಭೂಮಿಯ ಮೇಲ್ಮೈ ಮೇಲೆ ಬಿದ್ದು ಕೆಂಪು ಬಣ್ಣದಲ್ಲಿ ಪ್ರಕಾಶಿಸಲಿದೆ. ಇದರಿಂದಾಗಿ ಚಂದ್ರ ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ.
ಆಕಾಶವು ತಿಳಿಯಾಗಿ ಇದ್ದರೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಶ್ಚಿಮ ಅಮೆರಿಕ, ದಕ್ಷಿಣ ಅಮೆರಿಕ, ಹಿಂದೂ ಮಹಾಸಾಗರ, ಫೆಸಿಫಿಕ್ ಸಾಗರ, ಅಟ್ಲಾಂಟಿಕ್ ಸಾಗರ ಹಾಗೂ ಆಗ್ನೇಯ ಏಷ್ಯಾದ ವಿವಿಧ ಭಾಗಗಳಲ್ಲಿ ರಕ್ತ ಚಂದಿರ ಗೋಚರಿಸಲಿದೆ. ಈ ಭಾಗಗಳಲ್ಲಿ ಇರದ ಜನರು ಟೈಂ & ಡೇಟ್ ಎಂಬ ಯುಟ್ಯೂಬ್ ಚಾನೆಲ್ನಲ್ಲಿ ಈ ಕೌತುಕವನ್ನ ಕಣ್ತುಂಬಿಕೊಳ್ಳಬಹುದಾಗಿದೆ.