ಮೂರು ದಿನಗಳ ಹಿಂದಷ್ಟೇ ಗುಜರಾತಿನ ಅಹ್ಮದಾಬಾದ್ ನಲ್ಲಿರುವ ಕೋವಿಡ್ 19 ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಎಂಟು ಮಂದಿ ಸಜೀವ ದಹನವಾಗಿದ್ದರು. ಇದೀಗ ಮತ್ತೊಂದು ಅಗ್ನಿ ದುರಂತ ನಡೆದಿದೆ.
ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಕೋವಿಡ್ 19 ಕೇಂದ್ರವಾಗಿ ಬಳಕೆಯಾಗುತ್ತಿದ್ದ ಹೋಟೆಲ್ ಒಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಪರಿಹಾರ ಕಾರ್ಯಾಚರಣೆ ನಡೆದಿದೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯಂತೆ ದುರಂತದಲ್ಲಿ 7 ಮಂದಿ ಸಜೀವ ದಹನವಾಗಿದ್ದಾರೆಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.