ಕೊರೊನಾ ಪಾಸಿಟಿವ್ ಬಂದ್ರೆ ಏನು ಮಾಡ್ಬೇಕು..? ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬೇಕಾ ಅಥವಾ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸಬೇಕಾ ಎಂಬ ಪ್ರಶ್ನೆ ಕಾಡುವುದು ಸಹಜ. ರೋಗ ಲಕ್ಷಣವಿಲ್ಲವೆಂದ್ರೆ ಮನೆಯಲ್ಲಿಯೇ ಇರಿ ಎಂದು ವೈದ್ಯರು ಸಲಹೆ ನೀಡ್ತಾರೆ.
ಮಹಾರಾಷ್ಟ್ರದಲ್ಲಿ ವಿಭಿನ್ನ ಘಟನೆ ನಡೆದಿದೆ. ಕೊರೊನಾ ಸೋಂಕಿಗೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಆತನ ಪತ್ನಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಘಟನೆ ಭಂಡಾರ ಜಿಲ್ಲೆಯ ಲಖಂದೂರಿನಲ್ಲಿ ನಡೆದಿದೆ. ಪಾಸಿಟಿವ್ ಬರ್ತಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಹೇಳಿದ್ದರಂತೆ. ಆದ್ರೆ ಪತ್ನಿ ಇದನ್ನು ನಿರಾಕರಿಸಿ ಮನೆಗೆ ಕರೆದುಕೊಂಡು ಬಂದಿದ್ದರಂತೆ. ಮನೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಆತ ಸಾವನ್ನಪ್ಪಿದ್ದಾನೆ. ವೈದ್ಯಾಧಿಕಾರಿಗಳು ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ. ಕೊರೊನಾ ಸಾವಿಗೆ ಕುಟುಂಬಸ್ಥರನ್ನು ಕಾರಣ ಮಾಡಿ ದೂರು ದಾಖಲಿಸಿದ ಮೊದಲ ಪ್ರಕರಣ ಇದಾಗಿದೆ. ಮಹಿಳೆ ತನ್ನ ಪತಿ ಬಗ್ಗೆ ಹೆಚ್ಚು ಕಾಳಜಿ ವಹಿಸದೆ ನಿರ್ಲಕ್ಷ್ಯ ತೋರಿದ್ದು ಸಾವಿಗೆ ಕಾರಣ ಎನ್ನಲಾಗಿದೆ.
ವೈದ್ಯರ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ಮಹಿಳೆ ಕೊರೊನಾ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ್ರೆ ಎಲ್ಲರಿಗೂ ಶಿಕ್ಷೆಯಾಗಲಿದೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯಗಳು ತಮ್ಮದೆ ನಿಯಮ ಜಾರಿಗೆ ತಂದಿವೆ. ಅದನ್ನು ಪಾಲಿಸದೆ ಹೋದಲ್ಲಿ ಶಿಕ್ಷೆಯಾಗಲಿದೆ.