ಕೊರೋನಾ ಲಾಕ್ ಡೌನ್ ಸಮಯದಲ್ಲಿ ಟೈಂ ಪಾಸ್ ಮಾಡುವುದು ಹೇಗೆ ಎಂದು ಯಾರಾದರೂ ಯೋಚಿಸುತ್ತಿದ್ದರೆ, ತಲೆಗೆ ಹುಳ ಬಿಡುವ ಫೋಟೋ ಇಲ್ಲಿದೆ ನೋಡಿ.
ಹೌದು, ಮನೆಯಲ್ಲಿ ಹಾವನ್ನು ಕಂಡರೆ ನೀವು ಶಾಕ್ ಆಗದೇ ಇರುವುದಿಲ್ಲ. ಆದರೆ ಈಗ ನಾವು ತೋರಿಸುತ್ತಿರುವ ಚಿತ್ರದಲ್ಲಿ ಹಾವು ಇರುವುದೇ ಕಾಣುವುದಿಲ್ಲ. ಆದರೆ ಹಸಿರು ಬಣ್ಣದ ಈ ಫೋಟೋದಲ್ಲಿ ಹಾವು ಸುತ್ತಿಕೊಂಡಿದ್ದು, ಅದನ್ನು ಹುಡುಕುವುದೇ ನೆಟ್ಟಿಗರಿಗೆ ಚಾಲೆಂಜ್ ಆಗಿದೆ.
ಚಿಲ್ಡ್ರನ್ಸ್ ಬುಕ್‌ನ ಆಥರ್ ಜಾರ್ಜೆಲಿ ದುಡಾಸ್ ಎನ್ನುವವರು ಈ ಚಿತ್ರವನ್ನು ಬಿಡಿಸಿದ್ದು, ಪಝಲ್‌ನಲ್ಲಿರುವ ಹಾವನ್ನು ಹುಡುಕಲು ಹೇಳಿದ್ದಾರೆ. ಈ ಚಿತ್ರದಲ್ಲಿ ಹಸಿರು ಹಾವೊಂದು ಎಲೆಗಳ ಹಿಂದಿದೆ. ಆದರೆ ಇದನ್ನು ಹುಡುಕುವುದು ಕಷ್ಟದ ಕೆಲಸ. ಈ ಫೋಟೋ ಹಾಕುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುಮಾರು ಮಂದಿಗೆ ತಮ್ಮಿಂದ ಹುಡುಕಲು ಸಾಧ್ಯವಾಗಿಲ್ಲ ಎಂದು ಸೋಲನ್ನು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು ಹಾವನ್ನು ಹುಡುಕಿ, ಅದರ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ.
https://www.instagram.com/p/CBgEjfzjQwE/?utm_source=ig_embed