
ಸಾಧಾರಣವಾಗಿ ಬಸ್ಸುಗಳಲ್ಲಿ ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರಿಗೆ ಆಸನ ಕಾಯ್ದಿರಿಸುವ ವ್ಯವಸ್ಥೆ ಇದೆ. ಆದರೆ, ಕೋಲ್ಕತ್ತಾದ ಬಸ್ಸುಗಳಲ್ಲಿ ಮಂಗಳಮುಖಿಯರಿಗೆ ಆಸನ ಕಾಯ್ದಿರಿಸಲಾಗಿದೆ.
ಬಹುಬೇಡಿಕೆ ಹಿನ್ನೆಲೆಯಲ್ಲಿ ಮಾರ್ಗ ಸಂಖ್ಯೆ 205 ಮತ್ತು 205ಎ ಬಸ್ ಗಳಲ್ಲಿ ಎರಡು ಆಸನಗಳನ್ನು ತೃತೀಯ ಲಿಂಗಿಗಳಿಗೆ ಮೀಸಲಿಟ್ಟಿದೆ.
ಪ್ರಾಯೋಗಿಕವಾಗಿ ಎರಡು ಬಸ್ ಗಳಲ್ಲಿ ಈ ವ್ಯವಸ್ಥೆ ಮಾಡಿದ್ದು, ಯಶಸ್ವಿಯಾಗಿ ಹೆಚ್ಚಿನ ಬೇಡಿಕೆ ಬಂದರೆ ಇನ್ನಷ್ಟು ಬಸ್ ಗಳಲ್ಲಿ ಈ ಮೀಸಲಾತಿ ಕಲ್ಪಿಸಲಾಗುತ್ತದೆ.