ಕೊರೊನಾಗೆ ಅಗ್ಗದ ಔಷಧಿ ಸಿಕ್ಕಿದೆ. ಇದನ್ನು ಮಾರುಕಟ್ಟೆಗೆ ತರಲು ಔಷಧಿ ಕಂಪನಿಗೆ ಅನುಮತಿ ಸಿಕ್ಕಿದೆ. ಈ ಔಷಧಿಯನ್ನು ಮಾರುಕಟ್ಟೆಗೆ ತರಲು ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾದಿಂದ ಅನುಮತಿ ಸಿಕ್ಕಿದೆ. ಒಂದು ಟ್ಯಾಬ್ಲೆಟ್ ಬೆಲೆ ಕೇವಲ 59 ರೂಪಾಯಿಗಳಿಗೆ ಲಭ್ಯವಾಗಲಿದೆ.
ಈ ಔಷಧಿಯ ಹೆಸರು ಫ್ಯಾವಿಟನ್ (Faviton). ಇದನ್ನು ಬ್ರಿಂಟನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದೆ. ಇದು ಆಂಟಿವೈರಲ್ ಔಷಧವಾಗಿದ್ದು, ಕೊರೊನಾ ರೋಗಿಗಳಿಗೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡಲಿದೆ.
ಈ ಔಷಧಿಯನ್ನು Favipiravir ಎಂಬ ಹೆಸರಿನಿಂದಲೂ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಅಗ್ಗದ ಔಷಧಿಯನ್ನು ಎಲ್ಲರಿಗೂ ತಲುಪಿಸುವ ಪ್ರಯತ್ನ ನಡೆಯಲಿದೆ ಎಂದು ಕಂಪನಿ ಹೇಳಿದೆ.