ರಕ್ತದಲ್ಲಿ ಇದ್ದಕ್ಕಿದ್ದಂತೆ ಪ್ಲೇಟ್ಲೆಟ್ಗಳು ಇಳಿಕೆಯಾಗುವುದು ಹಾಗೂ ತೀವ್ರವಾದ ಆಯಾಸ ಉಂಟಾಗುವುದು ಇವು ಸಹ ಕೊರೊನಾದ ಆರಂಭಿಕ ಲಕ್ಷಣಗಳಾಗಿವೆ. ಇದಾದ ಬಳಿಕ ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಉಂಟಾಗುತ್ತದೆ. ಈ ಲಕ್ಷಣಗಳನ್ನ ನಿರ್ಲಕ್ಷಿಸಿದಲ್ಲಿ ಮುಂದೆ ಮಾರಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಜಾದ್ ನಗರ ಪ್ಯಾರಾ ರಸ್ತೆಯ ನಿವಾಸಿ 60 ವರ್ಷದ ಅಲೀಮ್ ಶೇಖ್ರಿಗೆ ಏಪ್ರಿಲ್ 18ರಂದು ತೀವ್ರವಾದ ಆಯಾಸ ಕಂಡುಬಂದ ಹಿನ್ನೆಲೆ ರಕ್ತ ಪರೀಕ್ಷೆಯನ್ನ ಮಾಡಿಸಿಕೊಂಡಿದ್ದರು. ಸಾಮಾನ್ಯವಾಗಿ ರಕ್ತದಲ್ಲಿ 1.5 ರಿಂದ 4.5 ಲಕ್ಷ ಇರುತ್ತೆ. ಆದರೆ ಅಲೀಮ್ ರಕ್ತದಲ್ಲಿ ಕೇವಲ 85 ಸಾವಿರ ಪ್ಲೇಟ್ಲೆಟ್ಗಳಷ್ಟೇ ಇದ್ದವು. ಇದಾದ ಬಳಿಕ ವೈದ್ಯರ ಸಲಹೆಯಂತೆ ಅಲೀಮ್ ಔಷಧಿ ಸೇವನೆ ಮಾಡಲು ಆರಂಭಿಸಿದ್ರು. ಆದರೆ ಏಪ್ರಿಲ್ 23ರಂದು ಅಲೀಮ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಈ ವೇಳೆ ರಕ್ತದಲ್ಲಿ ಪ್ಲೇಟ್ಲೆಟ್ಗಳ ಸಂಖ್ಯೆ 20 ಸಾವಿರಕ್ಕೆ ಇಳಿದಿತ್ತು. ಆದರೆ ಆಸ್ಪತ್ರೆಗೆ ದಾಖಲು ಮಾಡೋಣ ಅಂದರೆ ಅಲೀಮ್ಗೆ ಹಾಸಿಗೆ ಕೂಡ ಸಿಗಲಿಲ್ಲ. ಅವರು ವೈದ್ಯಕೀಯ ಸೌಲಭ್ಯಕ್ಕಾಗಿ ಕಾಯುತ್ತಿದ್ದರು ಎಂದು ಅಲೀಮ್ ಸೊಸೆ ಹೇಳಿದ್ದಾರೆ.
ಕೋವಿಡ್ನಿಂದ ಸಾವಿಗೀಡಾದವರ ಶವ ಸಾಗಿಸಲೂ ಸಿಗದ ಆಂಬುಲೆನ್ಸ್: ತಂದೆ ಶವವನ್ನು ಕಾರ್ ಟಾಪ್ ಮೇಲೆ ಕಟ್ಟಿ ಕೊಂಡೊಯ್ದ ಪುತ್ರ
ಇದೇ ರೀತಿ ಬಲಂಗ್ರಾಜ್ ನಿವಾಸಿ ರಾಜ್ ಕುಮಾರ್ ರಸ್ತೋಗಿ (59) ಕೂಡ ಏಪ್ರಿಲ್ 13ರಂದು ಆಯಾಸಕ್ಕೀಡಾದರು. ಈ ವೇಳೆ ರಕ್ತದಲ್ಲಿ ಕೇವಲ 21 ಸಾವಿರ ಪ್ಲೇಟ್ಲೆಟ್ಗಳಿವೆ ಎಂಬ ವಿಚಾರ ತಿಳಿದುಬಂತು. ಏಪ್ರಿಲ್ 15ರಂದು ರಸ್ತೋಗಿಗೆ ಉಸಿರಾಟದ ಸಮಸ್ಯೆ ಆರಂಭವಾಯ್ತು. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಿದಾಗ ರಸ್ತೋಗಿಗೆ ಕೋವಿಡ್ ನ್ಯೂಮೋನಿಯಾ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ರಸ್ತೋಗಿಗೆ ಜ್ವರ, ಕೆಮ್ಮು, ನೆಗಡಿಯಂತಹ ಯಾವುದೇ ಲಕ್ಷಣಗಳು ಇರಲಿಲ್ಲ. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಏಪ್ರಿಲ್ 20ರಂದು ನಿಧನರಾದ್ರು.
ಅದೇ ರೀತಿ ಸರೋಜಿನಿ ನಗರದ ನಿವಾಸಿ 78 ವರ್ಷದ ಅನುಪ್ ಕುಮಾರ್ ರಕ್ತದಲ್ಲೂ ಪ್ಲೇಟ್ಲೆಟ್ಗಳ ಸಂಖ್ಯೆ ಇಳಿಮುಖವಾಗಿತ್ತು. ಸಿಕ್ಕಾಪಟ್ಟೆ ಆಯಾಸದಿಂದ ಇರುತ್ತಿದ್ದ ಅನುಪ್ರಿಗೆ ಆರ್ಟಿ ಪಿಸಿಆರ್ ಟೆಸ್ಟ್ ಮಾಡಿಸುವಂತೆ ವೈದ್ಯರು ಸೂಚನೆ ನೀಡಿದ್ದರು. ರಿಪೋರ್ಟ್ನಲ್ಲಿ ಕೋವಿಡ್ ಪಾಸಿಟಿವ್ ಇರುವ ವಿಚಾರ ಬೆಳಕಿಗೆ ಬಂದಿದೆ. ಇವರಿಗೂ ಸಹ ಜ್ವರ, ಕೆಮ್ಮು ಕಾಣಿಸಿಕೊಂಡಿರಲಿಲ್ಲ.