alex Certify ಸಂದರ್ಶನದಲ್ಲಿ ಫೇಲ್ ಆದ ಪುತ್ರನ ಆತ್ಮಸ್ಥೈರ್ಯ ತುಂಬಿದ ತಂದೆಯ ಪತ್ರಕ್ಕೆ ನೆಟ್ಟಿಗರ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂದರ್ಶನದಲ್ಲಿ ಫೇಲ್ ಆದ ಪುತ್ರನ ಆತ್ಮಸ್ಥೈರ್ಯ ತುಂಬಿದ ತಂದೆಯ ಪತ್ರಕ್ಕೆ ನೆಟ್ಟಿಗರ ಮೆಚ್ಚುಗೆ

ಈ ವರ್ಷ ಬಲೇ ಸೂತಕಮಯವಾಗಿದೆ ಎಂದು ಎಲ್ಲರಿಗೂ ಅನಿಸತೊಡಗಿದೆ. ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಜೀವ ಹಾಗೂ ಜೀವನೋಪಾಯಗಳೆರಡಕ್ಕೂ ಭೀತಿ ಆವರಿಸಿದ್ದು, ಜನರು ಬಹಳ ಆತಂಕ ಹಾಗೂ ಅನಿಶ್ಚಿತತೆಯಿಂದ ಕಾಲ ಕಳೆಯುತ್ತಿದ್ದಾರೆ.

ಇಂಥ ಸಂದರ್ಭದಲ್ಲಿ, ಟಿಸಿಎಸ್‌ ಕಂಪನಿಯಲ್ಲಿ ಸಂದರ್ಶನ ಎದುರಿಸಿದ ಬಳಿಕವೂ ಕೆಲಸ ಸಿಗದೇ ಇದ್ದ ಮಗನಿಗೆ ಆತನ ತಂದೆ ಬರೆದ ಭಾವನಾತ್ಮಕ ಪತ್ರವು ನೆಟ್ಟಿಗರ ಹೃದಯ ಗೆಲ್ಲುತ್ತಿದೆ.

ತಮ್ಮ ಜೀವನಾನುಭವದ ಎರಕವನ್ನು ಹೊಯ್ದು, ಸ್ಪೂರ್ತಿಯುತ ಸಂದೇಶದ ಮೂಲಕ, ಕೆಲಸಕ್ಕೆ ಅರ್ಜಿ ಹಾಕಿದ್ದ ಮಗನ ಪ್ರಯತ್ನಗಳನ್ನು ಶ್ಲಾಘಿಸಿದ ತಂದೆ, ಇನ್ನಷ್ಟು ಕೆಲಸಗಳಿಗೆ ಖುಷಿಯಿಂದ ಅರ್ಜಿ ಸಲ್ಲಿಸಲು ಅಥವಾ ಉನ್ನತ ವ್ಯಾಸಂಗಕ್ಕೆ ಮುಂದಾಗಲು ಪ್ರೇರಣೆ ನೀಡುತ್ತಿದ್ದಾರೆ. ಆದಂಥ ಅನುಭವದಿಂದ ಸ್ವಲ್ಪವೂ ವಿಚಲಿತನಾಗದೇ, ಸರಿಯಾಗಿ ಊಟ/ನಿದ್ರೆ ಮಾಡಿ, ಮುಂದಿನ ದಿನಗಳಿಗೆ ಚೆನ್ನಾಗಿ ತಯಾರಾಗಲು ಆ ಪತ್ರದಲ್ಲಿ ತಮ್ಮ ತಂದೆ ಬರೆದಿರುವುದನ್ನು ಟ್ವಿಟರ್‌ ಬಳಕೆದಾರ ಸುದರ್ಶನ್‌ ಹಂಚಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...