alex Certify ಲಾಕ್ ​ಡೌನ್​ ಸಮಯದಲ್ಲಿ 1200 ಕಿ.ಮೀ. ಸೈಕಲ್​ ತುಳಿದಿದ್ದ ಬಾಲಕಿ ತಂದೆ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ​ಡೌನ್​ ಸಮಯದಲ್ಲಿ 1200 ಕಿ.ಮೀ. ಸೈಕಲ್​ ತುಳಿದಿದ್ದ ಬಾಲಕಿ ತಂದೆ ಇನ್ನಿಲ್ಲ

ಕಳೆದ ವರ್ಷ ಲಾಕ್​ಡೌನ್​ ಸಂಕಷ್ಟದ ಸಂದರ್ಭದಲ್ಲಿ ಜ್ಯೋತಿ ಕುಮಾರಿ ಎಂಬ 15 ವರ್ಷದ ಬಾಲಕಿ ತನ್ನ ತಂದೆಯನ್ನ ಕೂರಿಸಿಕೊಂಡು ಬರೋಬ್ಬರಿ 1200 ಕಿಲೋಮೀಟರ್​ವರೆಗೆ ಸೈಕಲ್​ ಚಲಾಯಿಸಿದ್ದು ನಿಮಗೆ ನೆನಪಿದ್ದಿರಬಹುದು. 7 ದಿನಗಳ ಸಮಯದಲ್ಲಿ ತನ್ನ ತಂದೆಯನ್ನ ಸೈಕಲ್​ ಮೇಲೆ ಕೂರಿಸಿಕೊಂಡು ದೆಹಲಿಯ ಗುರುಗಾಂವ್​ನಿಂದ ಈಕೆ ಬಿಹಾರದ ದರ್ಬಂಗಾವರೆಗೂ ಪ್ರಯಾಣ ಬೆಳೆಸುವ ಮೂಲಕ ಭಾರೀ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದಳು. ಈ ಸಾಹಸಿ ಪುತ್ರಿಯ ತಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗುರುಗಾಂವ್​ ಗ್ರಾಮದ ಜ್ಯೋತಿ ಕುಮಾರಿ ತಂದೆ ಮೋಹನ್​ ಪಾಸ್ವಾನ್​ ಒಬ್ಬ ಆಟೋ ಡ್ರೈವರ್​ ಆಗಿದ್ದು ಅಪಘಾತವೊಂದರ ಬಳಿಕ ಕಳೆದ ವರ್ಷ ಮಾರ್ಚ್​ನಿಂದ ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಾದ ಸ್ಥಿತಿಯಲ್ಲಿದ್ದರು.

ಕಳೆದ ವರ್ಷ ಮೊದಲ ಬಾರಿ ಲಾಕ್​ಡೌನ್​ ಆದೇಶ ಜಾರಿಯಾಗಿದ್ದ ವೇಳೆ ಸಾರ್ವಜನಿಕ ಸಾರಿಗೆ ಸೌಕರ್ಯವಿಲ್ಲದೇ ಅನೇಕ ಮಂದಿ ಸಂಕಷ್ಟವನ್ನ ಎದುರಿಸಿದ್ದರು. ಇದೇ ಸಾಲಿಗೆ ಸೇರಿದ್ದ ಜ್ಯೋತಿ ಬರೋಬ್ಬರಿ 1200 ಕಿಲೋಮೀಟರ್​ ಸೈಕಲ್​ ಚಲಾಯಿಸಿ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಗಳಿಸಿದ್ದಳು. ಇದಾದ ಬಳಿಕ ಈಕೆಗೆ ಪ್ರಧಾನ್​ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಸೇರಿದಂತೆ ಸಾಕಷ್ಟು ಗೌರವಗಳು, ವಿದ್ಯಾರ್ಥಿ ವೇತನ ಹಾಗೂ ದೇಣಿಗೆಗಳು ಹರಿದುಬಂದಿದ್ದವು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...