alex Certify ಬಿಗ್ ಬ್ರೇಕಿಂಗ್: ಸುಪ್ರೀಂ ಕೋರ್ಟ್ ರಚಿಸುವ ಸಮಿತಿಯಲ್ಲಿ ಸೇರ್ಪಡೆಗೊಳ್ಳಲು ರೈತ ಮುಖಂಡರ ನಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ಬ್ರೇಕಿಂಗ್: ಸುಪ್ರೀಂ ಕೋರ್ಟ್ ರಚಿಸುವ ಸಮಿತಿಯಲ್ಲಿ ಸೇರ್ಪಡೆಗೊಳ್ಳಲು ರೈತ ಮುಖಂಡರ ನಕಾರ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಯನ್ನ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನ್ನದಾತರು ಪ್ರತಿಭಟನೆ ಮುಂದುವರಿಸಿದ್ದಾರೆ. ಕೃಷಿ ಮಸೂದೆ ವಿರುದ್ಧ ಕೇಂದ್ರ ಹಾಗೂ ರೈತರ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟಕ್ಕೆ ಇದೀಗ ಸುಪ್ರೀಂ ಕೋರ್ಟ್​ ಎಂಟ್ರಿ ಕೊಟ್ಟಿದ್ದು ಕೇಂದ್ರ ಸರ್ಕಾರಕ್ಕೆ ನಿನ್ನೆಯೇ ಚಾಟಿ ಬೀಸಿತ್ತು.

ಕೇಂದ್ರ ಸರ್ಕಾರ ಈ ಕೂಡಲೇ ಕೃಷಿ ಮಸೂದೆ ರದ್ದು ಮಾಡಿ ಇದರ ಸಾಧಕ ಬಾಧಕಗಳ ಕುರಿತಾದ ಚರ್ಚೆಗೆ ಸಮಿತಿ ರಚನೆ ಮಾಡುವಂತೆ ಆದೇಶ ನೀಡಿತ್ತು. ಆದರೆ ಸುಪ್ರೀಂ ಕೋರ್ಟ್​ನ ಕಾಳಜಿಗೆ ಕೃತಜ್ಞತೆ ಸಲ್ಲಿಸಿದ ರೈತ ಸಂಘಟನೆಗಳು ನಾವು ಯಾವುದೇ ಸಮಿತಿಯ ಸದಸ್ಯರಾಗೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಸಂಯುಕ್ತ ಕಿಸಾನ್​ ಮೋರ್ಚಾ ಸಂಘಟನೆ, ಕೃಷಿ ಮಸೂದೆ ವಿಚಾರವಾಗಿ ಸುಪ್ರಿಂ ಕೋರ್ಟ್ ರೈತರ ಪರ ತೋರಿದ ಕಾಳಜಿಗೆ ಧನ್ಯವಾದ. ಆದರೆ ಕೃಷಿ ಮಸೂದೆ ಕುರಿತಾದ ಚರ್ಚೆಗೆ ಸುಪ್ರೀಂ ಕೋರ್ಟ್​ ನೇಮಿಸಿರುವ ಸಮಿತಿಯಲ್ಲಿ ರೈತರು ಭಾಗಿಯಾಗೋದಿಲ್ಲ. ಕೃಷಿ ಮಸೂದೆ ವಿರೋಧಿಸಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಪುನರುಚ್ಚರಿಸಿದೆ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...