
ನವದೆಹಲಿ: ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಇಂದು ದೆಹಲಿಯ ವಿಜ್ಞಾನ್ ಭವನದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ.
ಜನವರಿ 8 ರಂದು ಮತ್ತೊಮ್ಮೆ ಸಂಧಾನ ಸಭೆ ನಡೆಸುವ ಸಾಧ್ಯತೆ ಇದೆ. ಕೃಷಿ ಸಂಬಂಧಿತ ನೂತನ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ 40 ದಿನಗಳ ನಂತರವೂ ಮುಂದುವರೆದಿದೆ.
ಹೋರಾಟ ನಿರತ ರೈತರೊಂದಿಗೆ ಸರ್ಕಾರ ಈಗಾಗಲೇ 7 ಸಲ ಮಾತುಕತೆ ನಡೆಸಿದ್ದರೂ, ಪ್ರಯೋಜನವಾಗಿಲ್ಲ. ಇಂದು ರೈತ ನಾಯಕರೊಂದಿಗೆ ಮತ್ತೊಮ್ಮೆ ಸಭೆ ನಡೆಸಲಾಗಿದ್ದು, ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪದ ಕಾರಣ ಸಭೆ ವಿಫಲವಾಗಿದೆ. ಮತ್ತೊಮ್ಮೆ ಚರ್ಚಿಸಲು ಜನವರಿ 8 ರಂದು ಸಭೆ ನಡೆಸಲಾಗುವುದು ಎನ್ನಲಾಗಿದೆ.