ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯ ಬಗ್ಗೆ ಸರಿಯಾದ ಮಾಹಿತಿ ತಿಳಿಯದ ಮುಗ್ದ ರೈತರನ್ನ ವಿರೋಧಿಗಳು ಪ್ರಚೋದಿಸುತ್ತಿದ್ದಾರೆ ಎಂದು ಬಾಲಿವುಡ್ ಹಿರಿಯ ನಟಿ ಹಾಗೂ ಮಥುರಾ ಸಂಸದೆ ಹೇಮಾ ಮಾಲಿನಿ ಅಭಿಪ್ರಾಯ ಪಟ್ಟಿದ್ದಾರೆ.
ಮುಗ್ಧ ರೈತರಿಗೆ ತಮಗೆ ಏನು ಬೇಕು ಅನ್ನೋದು ಸರಿಯಾಗಿ ತಿಳಿದಿಲ್ಲ. ಅಥವಾ ಈ ಕೃಷಿ ಮಸೂದೆಯಲ್ಲಿ ತಪ್ಪಿದೆಯಾ ಇಲ್ಲವಾ ಅನ್ನೋದೂ ರೈತರಿಗೆ ತಿಳಿದಿಲ್ಲ. ಆದರೆ ಕೆಲವರ ಪ್ರಚೋದನೆಯಿಂದಾಗಿ ಪ್ರತಿಭಟನೆಯ ಹಾದಿ ತುಳಿದಿದ್ದಾರೆ ಎಂದು ಹೇಳಿದ್ರು.
ಇದೇ ವೇಳೆ ಕೃಷಿ ಮಸೂದೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನ ಸ್ವಾಗತಿಸಿದ ಅವರು ಸುಪ್ರೀಂ ಕೋರ್ಟ್ನ ಈ ತೀರ್ಪು ಪ್ರಸ್ತುತ ಉಂಟಾಗಿರುವ ಉದ್ವೇಗವನ್ನ ಕಡಿಮೆ ಮಾಡಿ ಸಮಾಜದಲ್ಲಿ ಶಾಂತಿ ನೆಲೆಸಲು ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.
ಆದರೂ ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಪಂಜಾಬ್ನಲ್ಲಿ ಮೊಬೈಲ್ ಫೋನ್ ಟವರ್ಗಳನ್ನ ಧ್ವಂಸಗೊಳಿಸಿದ ರೀತಿ ಸರಿ ಎನ್ನಿಸಲಿಲ್ಲ ಎಂದು ಹೇಮಾಮಾಲಿನಿ ಹೇಳಿದ್ದಾರೆ.