alex Certify ಜನವರಿ 26 ರ ಟ್ರಾಕ್ಟರ್ ರ್ಯಾಲಿಗೆ ಭರ್ಜರಿ ತಯಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 26 ರ ಟ್ರಾಕ್ಟರ್ ರ್ಯಾಲಿಗೆ ಭರ್ಜರಿ ತಯಾರಿ

ಚಂಡೀಗಡ: ಎಪಿಎಂಸಿ ಕಾಯ್ದೆ ಸೇರಿ ಇತರ ರೈತ ಸಂಬಂಧಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಜನವರಿ 26 ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನವದೆಹಲಿಯಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಲು ರೈತ ಸಂಘಟನೆಗಳು ಭಾರಿ ಸಿದ್ಧತೆ ನಡೆಸಿವೆ.

ಪಂಜಾಬ್ ನ ಗ್ರಾಮೀಣ ಭಾಗದಲ್ಲಿ ಟ್ರ್ಯಾಕ್ಟರ್ ರ್ಯಾಲಿ ಮಾಡಿ, ಜ. 26 ರ ಬೃಹತ್ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ನವನಶಹರ, ಗುರುದಾಸಪುರ ಮುಂತಾದೆಡೆ ರ್ಯಾಲಿ ನಡೆಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಪ್ರತಿ ಊರಿನಿಂದ 5 ರಿಂದ 10 ಕೆಲವೆಡೆಯಿಂದ 50 ಟ್ರಾಕ್ಟರ್ ಗಳು ಬರುವ ನಿರೀಕ್ಷೆ ಇದೆ ಎಂದು ಭಾರತೀಯ ಕಿಸಾನ್ ಸಂಘದ ಸಂಘಟನಾ ಕಾರ್ಯದರ್ಶಿ ಸುಖದೇವ ಸಿಂಘ್ ಕೊಕ್ರಿಕಾಲನ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...