ಸೋಲಾರ್ ಚಾಲಿತ ಬ್ಯಾಟರಿಯಲ್ಲಿ ಓಡುವ ನಾಲ್ಕು ಚಕ್ರದ ವಾಹನವೊಂದನ್ನು ನಿರ್ಮಿಸಿರುವ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರೈತರೊಬ್ಬರು ನೆಟ್ಟಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಯೂರ್‌ಭಂಜ್ ಜಿಲ್ಲೆಯ ಕರಂಜಿಯಾ ಪ್ರದೇಶದ ಸುಶೀಲ್ ಅಗರ್ವಾಲ್ ಹೆಸರಿನ ಈ ವ್ಯಕ್ತಿ, 850 ವ್ಯಾಟ್ ಮೋಟರ್ ಬಲದಲ್ಲಿ ಓಡುವ ಹಾಗೂ 100 ಎಎಚ್/54 ವೋಲ್ಟ್ಸ್ ಬ್ಯಾಟರಿಯಲ್ಲಿ ಚಲಿಸುವ ಈ ವಾಹನದ ಅನ್ವೇಷಣೆ ಮಾಡಿದ್ದಾರೆ. ಒಮ್ಮೆ ಚಾರ್ಜ್ ಮಾಡಿದಲ್ಲಿ ಈ ವಾಹನ 300 ಕಿಮೀ ದೂರ ಚಲಿಸಬಲ್ಲದು. ಬ್ಯಾಟರಿ ಚಾರ್ಜ್ ಮಾಡಲು ಎಂಟೂವರೆ ಗಂಟೆ ಹಿಡಿಯುತ್ತದೆ.
ಮದುವೆಯಾದ ದಿನವೇ ಚಿನ್ನಾಭರಣ ಸಮೇತ ವಧು ಎಸ್ಕೇಪ್....!
ದೇಶಾದ್ಯಂತ ಕೋವಿಡ್-19 ಲಾಕ್‌ಡೌನ್ ಇದ್ದ ಸಂದರ್ಭದಲ್ಲಿ ಯೂಟ್ಯೂಬ್ ನೋಡಿಕೊಂಡು, ಪುಸ್ತಕಗಳನ್ನು ಓದಿಕೊಂಡು ಈ ವಾಹನ ಅಭಿವೃದ್ಧಿಪಡಿಸಿದ್ದಾಗಿ ಅಗರ್ವಾಲ್ ತಿಳಿಸಿದ್ದಾರೆ.
“ನನಗೆ ಮನೆಯಲ್ಲಿ ವರ್ಕ್‌ಶಾಪ್ ಇಲ್ಲ. ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲೇ ಕುಳಿತು ಇದನ್ನು ಮಾಡಲು ಆರಂಭಿಸಿದೆ. ಒಮ್ಮೆ ಪೂರ್ಣ ಚಾರ್ಜ್ ಆದಲ್ಲಿ ಇದು 300 ಕಿಮೀ ಚಲಿಸಬಲ್ಲದು. ಇದು ನಿಧಾನವಾಗಿ ಚಾರ್ಜ್ ಆಗುವ ಬ್ಯಾಟರಿ. ಇಂಥ ಬ್ಯಾಟರಿಗಳಿಗೆ ಸುದೀರ್ಘಾಯುಷ್ಯ ಇದ್ದು, 10 ವರ್ಷಗಳವರೆಗೂ ಬಾಳಿಕೆ ಬರುತ್ತವೆ,” ಎನ್ನುತ್ತಾರೆ ಅನ್ವೇಷಕ ಅಗರ್ವಾಲ್.