ರಾಜಸ್ಥಾನದ ರೈತನೊಬ್ಬನಿಗೆ ಕೆಲ ದಿನಗಳ ಹಿಂದೆ ತನ್ನ ಜೀವಮಾನದ ಶಾಕ್ ಒಂದು ಕಾದಿದ್ದು. ಅದನ್ನು ಕೇಳಿದರೆ ನಿಮ್ಮ ಎದೆಯೂ ಒಮ್ಮೆ ಹೊಡೆಯುವುದರಲ್ಲಿ ಅನುಮಾನವಿಲ್ಲ.
ಹೌದು, ರಾಜಸ್ಥಾನ ಮೂಲದ 22 ವರ್ಷದ ಪೆಮರಾಂ ಪಾಟೀಲ್, ಅವರಿಗೆ ಆ.22ಕ್ಕೆ ವಿದ್ಯುತ್ ಬಿಲ್ ಬಂದಿದೆ. ಅದರಲ್ಲಿ ಎರಡು ತಿಂಗಳ ವಿದ್ಯುತ್ ಬಿಲ್ ಬರೋಬ್ಬರಿ 3.71 ಕೋಟಿ ರೂ. ಬಂದಿದ್ದು, 38,514,098 ಯೂನಿಟ್ ಬಳಸಿದ್ದಾರೆ ಎಂದು ಬಿಲ್‌ನಲ್ಲಿ ಹೇಳಲಾಗಿತ್ತು.
ಈ ಬಿಲ್ ನೋಡುತ್ತಿದ್ದಂತೆ ಗಾಬರಿ ಬಿದ್ದು ರಾಜಸ್ಥಾನ ಸರಕಾರ ಇ-ಮಿತ್ರ ಕೇಂದ್ರಕ್ಕೆ ಓಡಿ ಹೋಗಿ ಅಳಲನ್ನು ತೋಡಿಕೊಂಡಿದ್ದಾನೆ. ಆಗ ಈ ಬಗ್ಗೆ ವಿಚಾರಣೆ ನಡೆಸಿದ್ದ ಅಧಿಕಾರಿಗಳು, ತಾಂತ್ರಿಕ ದೋಷದಿಂದ ಇಷ್ಟು ದೊಡ್ಡ ಮೊತ್ತ ಬಂದಿದೆ ಎಂದು ಹೇಳಿದ್ದಾರೆ.
ಮೀಟರ್ ರೀಡಿಂಗ್ ಅನ್ನು ತಪ್ಪಾಗಿ ನಮೂದಿಸಿದ್ದರಿಂದ ಇಷ್ಟು ದೊಡ್ಡ ಪ್ರಮಾಣದ ವಿದ್ಯುತ್ ಬಿಲ್ ಬಂದಿತ್ತು. ಬಳಿಕ ನೂತನ ಬಿಲ್ ರೂಪಿಸಿ 6414 ರೂ. ಪಾವತಿಸುವಂತೆ ಹೇಳಿದ್ದಾರೆ, ಈ ಬಗ್ಗೆ ಪಾಟೀಲ್ ಮಾತನಾಡಿದ್ದು, ಇ-ಮಿತ್ರಕ್ಕೆ ಬಂದಿದ್ದರಿಂದ ಈ ಸಮಸ್ಯೆ ಬಗೆಹರಿಸಿದ್ದಾರೆ. ಒಂದೇ ಸಾರಿಗೆ ಇಷ್ಟು ದೊಡ್ಡ ಮೊತ್ತದ ಬಿಲ್ ನೋಡಿ ಗಾಬರಿಯಾಗಿತ್ತು ಎಂದಿದ್ದಾರೆ.