ತನ್ನ ಉನ್ನತ ವ್ಯಾಸಂಗಕ್ಕಾಗಿ ದಿಲ್ಲಿಯಲ್ಲಿದ್ದ ಮನೆಯನ್ನೇ ಮಾರಿದ ತಂದೆ ಇಂದು ಹೆಮ್ಮೆಪಡುವ ಕೆಲಸವನ್ನು ಮಗ ಮಾಡಿದ್ದಾನೆ.
ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದ ಪರೀಕ್ಷೆಯಲ್ಲಿ 26ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಗೆ ಆಯ್ಕೆಯಾಗಿದ್ದಾರೆ.
ಇಂದೋರ್ ನ ಪ್ರದೀಪ್ ಸಿಂಗ್ 7ನೇ ತರಗತಿಯಲ್ಲಿ ಇದ್ದಾಗಲೇ ಐಎಎಸ್ ಅಧಿಕಾರಿ ಆಗುವ ಕನಸು ಕಂಡಿದ್ದರು. ಆದರೆ, ಪೆಟ್ರೋಲ್ ಬಂಕ್ ಅಲ್ಲಿ ಕೆಲಸ ಮಾಡಿಕೊಂಡಿದ್ದ ತಂದೆ ಮನೋಜ್ ಸಿಂಗ್ ಸಂಪಾದನೆಯಲ್ಲಿ ಸಂಸಾರ ತೂಗಿಸುವುದೇ ಕಷ್ಟವಿತ್ತು. ಕೊನೆಗೆ ತಾವಿದ್ದ ಸ್ವಂತ ಮನೆಯನ್ನೇ ಮಾರಿದ ಮನೋಜ್, ಮಗನ ಓದಿಗೆ ಹಣ ಮೀಸಲಿಟ್ಟರು.
ತನ್ನ ಹಾಗೂ ತಂದೆಯ ಆಶಯದಂತೆ 2018 ರಲ್ಲಿ ಮೊಟ್ಟ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ಪ್ರದೀಪ್, 96ನೇ ಸ್ಥಾನ ಪಡೆದಿದ್ದರು. ಈ ವೇಳೆ ಐಎಎಸ್ ಬದಲು, ಐ ಆರ್ ಎಸ್ ಸೇವೆಗೆ ಆಯ್ಕೆಯಾದರು.
ಛಲ ಬಿಡದೆ 2019 ರಲ್ಲೂ ತಯಾರಿ ನಡೆಸಿ ಪರೀಕ್ಷೆ ಬರೆದ ಪ್ರದೀಪ್, 26 ನೇ ಸ್ಥಾನ ಪಡೆಯುವ ಮೂಲಕ ಐಎಎಸ್ ಗೆ ಆಯ್ಕೆಯಾಗಿದ್ದಾರೆ.