ಈ ಕೊರೊನಾ ಜನರ ಆಚಾರ ವಿಚಾರಗಳನ್ನೇ ಬುಡಮೇಲು ಮಾಡುತ್ತಿದೆ. ಸಾಂಪ್ರದಾಯಿಕ ಕಾರ್ಯಗಳನ್ನು ಸುಲಲಿತವಾಗಿ ನೆರವೇರಿಸಲೂ ಬಿಡುತ್ತಿಲ್ಲ.
ಯುವತಿಯೊಬ್ಬಳು ವಿವಾಹ ಪೂರ್ವದಲ್ಲಿ ಅರಿಶಿಣ ಶಾಸ್ತ್ರವನ್ನು ವಿಚಿತ್ರವಾಗಿ ಆಚರಿಸಿರುವ ವಿಡಿಯೋ ವೈರಲ್ ಆಗಿದೆ.
ಪಾಯಲ್ ಭಯಾನಾ ಎಂಬವರು ಟ್ವಿಟ್ಟರ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮದುವೆಗೆ ಮೊದಲು ನಡೆಯುವ ‘ಅರಿಶಿಣ ಶಾಸ್ತ್ರ’ ವನ್ನು ಅದರಲ್ಲಿ ನೋಡಬಹುದು.
ಇದು ದೇಶೀಯ ವಿವಾಹ ಕಾರ್ಯಕ್ರಮದಲ್ಲಿ ಬಹಳ ಮುಖ್ಯವಾದ ವಿವಾಹ ಪೂರ್ವ ವಿಧಿ. ವಿಡಿಯೊದಲ್ಲಿರುವಂತೆ ತಾಯಿ ತನ್ನ ಮಗಳ ಮೇಲೆ ಅರಿಶಿಣ ಹಚ್ಚುತ್ತಾರೆ. ಆಕೆ ಕೈಯಲ್ಲಿ ಅರಿಶಿಣ ಹಚ್ಚುವ ಬದಲು, ಆದರೆ ಪೇಂಟ್ ರೋಲರ್ ಅನ್ನು ಬಳಸಿದ್ದಾರೆ.
ಕೋವಿಡ್-19 ರ ಸಮಯದಲ್ಲಿ ವಿವಾಹ ಸಮಾರಂಭಗಳಿಗೆ ನೀಡಲಾದ ಸುರಕ್ಷತಾ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು ಈ ರೀತಿ ಮಾಡಲಾಯಿತಂತೆ. ಈ ಸೋಷಿಯಲ್ ಡಿಸ್ಟೆನ್ಸಿಂಗ್ ಅರಿಶಿಣ ಶಾಸ್ತ್ರ ಈಗ ನೆಟ್ಟಿಗರ ಗಮನ ಸೆಳೆದಿದೆ.