ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮುಸ್ಲಿಂ ಧರ್ಮದ ಟೊಪ್ಪಿಯನ್ನ ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಮೂಲಕ ಬಿಜೆಪಿ ಬೆಂಬಲಿಗರನ್ನ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗ್ತಿದೆ.
ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತವನ್ನ ಸೆಳೆಯೋದಕ್ಕೆ ಮೋದಿ ಹಾಗೂ ಅಮಿತ್ ಶಾ ಕೊನೆಗೂ ಮುಸ್ಲಿಮರ ಟೋಪಿ ಧರಿಸಿದ್ದಾರೆ ಎಂದು ಈ ಫೋಟೋ ನೋಡಿದ ಅನೇಕರು ಹೇಳಿದ್ದರು.
ಆದರೆ ಫ್ಯಾಕ್ಟ್ಚೆಕ್ನಲ್ಲಿ ಫೋಟೋದ ಅಸಲಿಯತ್ತು ಬಯಲಾಗಿದೆ. ಇದೊಂದು ಎಡಿಟೆಡ್ ಫೋಟೋ ಆಗಿದ್ದು, ಮುಸ್ಲಿಮರ ಟೋಪಿಯನ್ನ ಫೋಟೋಶಾಪ್ ಮೂಲಕ ಅಂಟಿಸಲಾಗಿದೆ.
ಇದರ ಮೂಲ ಫೋಟೋ 2019ರಲ್ಲಿ ಅರುಣ್ ಜೆಟ್ಲಿ ನಿಧನದರಾದ ವೇಳೆ ಜೆಟ್ಲಿ ನಿವಾಸಕ್ಕೆ ಸಂತಾಪ ಸೂಚಿಸಲು ಮೋದಿ ಹಾಗೂ ಅಮಿತ್ ಶಾ ತೆರಳಿದ್ದಾಗ ಕ್ಲಿಕ್ಕಿಸಲಾಗಿತ್ತು. ಇದೀಗ ಈ ಫೋಟೋವನ್ನ ಮಾರ್ಪಾಡು ಮಾಡಿ ಕಿಡಿಗೇಡಿಗಳು ಇನ್ನಿಲ್ಲದ ಅರ್ಥವನ್ನ ಕಲ್ಪಿಸಿದ್ದಾರೆ.