ನವದೆಹಲಿ: ಜಾಲತಾಣಗಳು ವಿಶ್ವವ್ಯಾಪಿ. ಕ್ಷಣಾರ್ಧದಲ್ಲಿ ಮಾಹಿತಿಯನ್ನು ವಿಶ್ವವ್ಯಾಪಿ ಬಿತ್ತರಿಸಬಲ್ಲ ಅಗಾಧ ಸಾಮರ್ಥ್ಯ ಹೊಂದಿವೆ. ಆದರೆ,ಕೆಲವು ಕಿಡಿಗೇಡಿಗಳು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಯಾವುದೋ ಫೋಟೋಕ್ಕೆ ಇನ್ಯಾವುದೋ ಮಾಹಿತಿಯ ಕ್ಯಾಪ್ಶನ್ ನೀಡಿ ಬಳಕೆದಾರರ ಹಾದಿ ತಪ್ಪಿಸುವ ಕಾರ್ಯ ಜೋರಾಗಿದೆ. ಅಂಥದ್ದೇ ಒಂದು ವಿಷಯ ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಗಿದೆ.
ವಾರಣಾಸಿಯಲ್ಲಿನ ಗಂಗಾನದಿಯ ವೈಮಾನಿಕ ಚಿತ್ರಣ ಎಂಬ ಫೋಟೋವೊಂದು ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಗೆ ಹಾಕಿದಾಗ ಫೋಟೋ ದುಬೈನದ್ದು ಎಂಬುದು ಖಚಿತವಾಗಿದೆ.
ಯುನೈಟೆಡ್ ಅರಬ್ ಎಮರೈಟ್ಸ್ ಸರ್ಕಾರ ರಚಿಸಿದ ಅತಿ ದೊಡ್ಡ ಮಾನವ ನಿರ್ಮಾಣದ ದ್ವೀಪ ಪಾಮ್ ಜುಮೆರಿಹಾದ ವೈಮಾನಿಕ ಚಿತ್ರ ಇದಾಗಿದೆ. ಟ್ರಾವೆಲ್ ಏಜೆನ್ಸಿಯೊಂದು ಅಪ್ ಲೋಡ್ ಮಾಡಿದ್ದ ಫೋಟೋವನ್ನು ವಾರಣಾಸಿಯ ಫೋಟೋ ಎಂದು ದುರ್ಬಳಕೆ ಮಾಡಲಾಗಿದೆ.
https://www.facebook.com/ashu.bhalla.566/posts/691106444864686