
ಕೊರೊನಾ ಮಧ್ಯೆ ಬ್ಲಾಕ್ ಫಂಗಸ್ ಹಾವಳಿ ಹೆಚ್ಚಾಗಿದೆ. ಬ್ಲಾಕ್ ಫಂಗಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಯಾಗ್ತಿದೆ. ಮನೆಯಲ್ಲಿರುವ ಫ್ರಿಜ್, ಈರುಳ್ಳಿಯಿಂದಲೂ ಬ್ಲಾಕ್ ಫಂಗಸ್ ಬರುತ್ತೆ ಎಂಬ ಸುದ್ದಿ ಹರಡಿದೆ. ಈರುಳ್ಳಿ ಖರೀದಿಸುವ ವೇಳೆ ಗಮನ ನೀಡಿ. ಈರುಳ್ಳಿ ಸಿಪ್ಪೆ ಮೇಲಿರುವ ಕಪ್ಪು ಕಲೆಗಳು ಬ್ಲಾಕ್ ಫಂಗಸ್ ಆಗಿರುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿದೆ. ಹಾಗೆ ಫ್ರಿಜ್ ನಲ್ಲಿರುವ ಹಳೆ ಆಹಾರಗಳು ಕೂಡ ಬ್ಲಾಕ್ ಫಂಗಸ್ ಗೆ ಕಾರಣವಾಗುತ್ತೆ ಎಂದು ಹೇಳಲಾಗಿದೆ.
ಇದ್ರ ಬಗ್ಗೆ ತಜ್ಞರಿಂದ ಮಾಹಿತಿ ಪಡೆದಾಗ ಸತ್ಯ ಹೊರಬಿದ್ದಿದೆ. ಈರುಳ್ಳಿ ಮೇಲಿರುವ ಕಪ್ಪು ಕಲೆಗೂ ಬ್ಲಾಕ್ ಫಂಗಸ್ ಗೂ ಸಂಬಂಧವಿಲ್ಲವೆಂಬುದು ಗೊತ್ತಾಗಿದೆ. ಬ್ಲಾಕ್ ಫಂಗಸ್ ಬಗ್ಗೆ ಮಾತನಾಡಿದ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ, ಕೊರೊನಾ ಪ್ರಕರಣಗಳು ಕಡಿಮೆಯಾದಂತೆ, ಬ್ಲಾಕ್ ಫಂಗಸ್ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ನೆನಪಿಡುವ ಪ್ರಮುಖ ವಿಷಯವೆಂದರೆ ಮ್ಯೂಕರ್ ಮೈಕೋಸಿಸ್ ಕಪ್ಪು ಶಿಲೀಂಧ್ರವಲ್ಲ. ಇದಕ್ಕೆ ತಪ್ಪಾಗಿ ಹೆಸರಿಡಲಾಗಿದೆ. ರಕ್ತ ಪೂರೈಕೆಯ ಕೊರತೆಯಿಂದಾಗಿ, ಚರ್ಮದ ಬಣ್ಣವು ಸ್ವಲ್ಪಮಟ್ಟಿಗೆ ಮಸುಕಾಗುತ್ತದೆ. ಈ ಕಾರಣದಿಂದಾಗಿ ಈ ಸ್ಥಳವು ಕಪ್ಪು ಬಣ್ಣಕ್ಕೆ ತಿರುಗಿದೆ. ಹಾಗಾಗಿ ಅದಕ್ಕೆ ಬ್ಲಾಕ್ ಫಂಗಸ್ ಎಂದು ಕರೆಯಲಾಗುತ್ತಿದೆ ಎಂದು ರಂದೀಪ್ ಹೇಳಿದ್ದಾರೆ.