ಮಾಸ್ಕ್ ಗಳು ಕೊರೊನಾದಿಂದ ರಕ್ಷಣೆ ನೀಡುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನೂ ನೀಡಬಲ್ಲದು. ಮಾಸ್ಕ್ ಧರಿಸುವುದರಿಂದ ವೈರಾಣುಗಳ ನಿಗ್ರಹ ಸಾಧ್ಯ ಎಂದು ಸಂಶೋಧನೆಯೊಂದು ಹೇಳಿದ್ದು, ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಅಂಡ್ ಅಡ್ವಾನ್ಸಸ್ ನಲ್ಲಿ ಪ್ರಕಟಗೊಂಡಿದೆ.
ಇಡೀ ಜಗತ್ತೇ ಮಾಸ್ಕ್ ಧರಿಸುತ್ತಿರುವುದು ಕೊರೊನಾ ವಿರುದ್ಧವೂ ರಾಮಬಾಣದಂತಾಗಿದೆ. ಸೋಂಕಿನ ಹರಡುವಿಕೆಯನ್ನು ಕಡಿಮೆ ಮಾಡಿದೆ.
ಭಾರತದಂತಹ ಜನಸಂಖ್ಯಾ ಸಾಂದ್ರತೆ ಹೆಚ್ಚಿರುವ ದೇಶದಲ್ಲಿ ಮಾಸ್ಕ್ ಧಾರಣೆಯಿಂದ ಸೋಂಕು ಹೆಚ್ಚು ವ್ಯಾಪಿಸಿಲ್ಲ. ಆದರೆ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ ಎನ್ನುತ್ತಾರೆ ಡಾ.ಶೈಲಜಾ ವೈದ್ಯ ಗುಪ್ತ.