ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ಬಳಕೆದಾರರಿಗೆ ಇಲ್ಲೊಂದಿಷ್ಟು ಮಾಹಿತಿ ಇದೆ. ಫೇಸ್‌ಬುಕ್ ಪೇಜ್ ಗಳಿಗೆ ಹೊಸ ವಿನ್ಯಾಸ ಮಾಡಲಾಗಿದೆ. ಹಳೆಯ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳಾಗಿವೆ ಎಂದು ಕಂಪನಿ ಬುಧವಾರ ಮಾಹಿತಿ ನೀಡಿದೆ.
ಕಲಾವಿದರು, ಪ್ರಸಿದ್ಧ ವ್ಯಕ್ತಿಗಳು ಹಾಗೂ ಉತ್ಪನ್ನಗಳು ಬಳಸುವ ಪೇಜ್ ಗಳಲ್ಲಿ “ಲೈಕ್” ಬಟನ್ ನ್ನು ತೆಗೆಯಲಾಗಿದೆ. ಇನ್ನು ಫಾಲೋವರ್ ಗಳನ್ನು ಮಾತ್ರ ಇರಿಸಲಾಗುತ್ತದೆ ಎಂದು ಫೇಸ್ ಬುಕ್ ಆಡಳಿತ ಮಂಡಳಿ ತಿಳಿಸಿದೆ.
ಜನ ತಮ್ಮ ಇಷ್ಟದ ಪೇಜ್ ಗಳ ಜತೆ ಕನೆಕ್ಟ್ ಆಗಲು ಕೆಲ ಅಂಶಗಳನ್ನು ಸರಳೀಕರಣ ಮಾಡಲಾಗಿದೆ. ವಿಶ್ವಾಸಾರ್ಹ ಸುದ್ದಿ, ಮಾಹಿತಿಗಳ ಜತೆ ಪೇಜ್ ಗೆ ಸೇರಲು ಅನುವು ಮಾಡಿಕೊಡಲಿದ್ದೇವೆ ಎಂದು ಫೇಸ್ ಬುಕ್ ತಿಳಿಸಿದೆ.