ಅತ್ಯಪರೂಪವಾದ ಕಪ್ಪು ಹುಲಿಯೊಂದು ಒಡಿಶಾದಲ್ಲಿ ಕಾಣಿಸಿಕೊಂಡಿದೆ. ಮೆಲಾನಿಸ್ಟಿಕ್ ಟೈಗರ್ ಎಂಬ ಅಧಿಕೃತ ನಾಮಧಾರಿಯಾದ ಈ ಹುಲಿಯ ಜಾತಿಯ ಏಳು ಪ್ರಾಣಿಗಳು ಮಾತ್ರ ಉಳಿದಿದ್ದು, ಇವೆಲ್ಲಾ ಒಡಿಶಾದಲ್ಲೇ ಇವೆ ಎಂದು ತಜ್ಞರು ಹೇಳಿದ್ದಾರೆ.
ವನ್ಯಜೀವಿ ಪ್ರಿಯ ಹಾಗೂ ಹವ್ಯಾಸಿ ಛಾಯಾಗ್ರಾಹಕ ಸೌಮೆನ್ ಬಜ್ಪೇಯಿ ಈ ಚಿತ್ರಗಳನ್ನು ಸೆರೆಹಿಡಿದ್ದಾರೆ.
ವಂಶವಾಹಿಗಳ ಕಾರಣದಿಂದ ಹುಲಿಯ ಮೈಮೇಲೆ ಕಪ್ಪು ಪಟ್ಟಿಗಳು ಮೂಡಿವೆ. 2018ರ ಹುಲಿ ಗಣತಿ ಪ್ರಕಾರ ಕಪ್ಪು ಪಟ್ಟಿಗಳಿರುವ ಹುಲಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಜಗತ್ತಿನಲ್ಲಿರುವ ಕಪ್ಪು ಹುಲಿಗಳ ಪೈಕಿ 70%ನಷ್ಟು ಒಡಿಶಾದಲ್ಲೇ ಇವೆ. ಇಲ್ಲಿನ ಸಿಂಪಿಲಾಲ್ ಹುಲಿ ಸಂರಕ್ಷಣಾ ಧಾಮದಲ್ಲಿ ಹೆಚ್ಚಿನ ಕಪ್ಪು ಹುಲಿಗಳನ್ನು ಕಾಣಬಹುದಾಗಿದೆ.
ಬೇರೆ ಬೇರೆ ತಳಿಗಳ ಹುಲಿಗಳು ಸಂಧಿಸಿದಾಗ ಜನಿಸುವ ಈ ಕಪ್ಪು ಹುಲಿಗಳು ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿರುತ್ತವೆ. ಇಂಥ ಮೊದಲ ಹುಲಿಯನ್ನು 1990ರಲ್ಲಿ ಭಾರತದಲ್ಲಿ ಪತ್ತೆ ಮಾಡಲಾಗಿತ್ತು.