ಕೊರೊನ ವೈರಸ್ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಯುವಕರನ್ನು ಎರಡನೇ ಅಲೆ ಕಂಗೆಡಿಸಿದೆ. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ. ಈಗಾಗಲೇ ಮಕ್ಕಳ ಚಿಕಿತ್ಸೆಗೆ ತಯಾರಿ ನಡೆದಿದೆ.
ಸಮೀಕ್ಷೆ ಪ್ರಕಾರ ಭಾರತದಲ್ಲಿ 12 ವರ್ಷದೊಳಗಿನ 16.5 ಕೋಟಿ ಜನಸಂಖ್ಯೆಯಿದೆ. ಇದ್ರಲ್ಲಿ ಶೇಕಡಾ 20ರಷ್ಟು ಮಕ್ಕಳು ಸೋಂಕಿಗೆ ಒಳಗಾಗಿ ಶೇಕಡಾ 5ರಷ್ಟು ಮಕ್ಕಳು ಗಂಭೀರ ಪರಿಸ್ಥಿತಿ ಎದುರಿಸಿದ್ರೂ ಅವರುಗಳಿಗೆ ಹಾಸಿಗೆ ವ್ಯವಸ್ಥೆ ಮಾಡಬೇಕಾಗುತ್ತದೆ.
ಮಕ್ಕಳನ್ನು ಐಸಿಯುವಿನಲ್ಲಿಡಬೇಕಾದ್ರೆ ಪಾಲಕರ ಅವಶ್ಯಕತೆಯಿದೆ. ಹಾಲುಣಿಸುವ ತಾಯಿ ಅಲ್ಲಿರಬೇಕಾಗುತ್ತದೆ. ಮಕ್ಕಳು ಆಕ್ಸಿಜನ್ ಮುಖವಾಡ ತೆಗೆಯದಂತೆ ನೋಡಿಕೊಳ್ಳಬೇಕಾಗುತ್ತದೆ. ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗದಂತೆ ರಕ್ಷಣೆ ನೀಡಬೇಕೆಂದ್ರೆ ಪಾಲಕರಿಗೆ ಲಸಿಕೆ ಅಗತ್ಯವಿದೆ. ಪೋಷಕರಿಗೆ ಎರಡು ಡೋಸ್ ಲಸಿಕೆ ನೀಡಬೇಕು. ಕೆಲವೇ ಕೆಲವು ತಿಂಗಳಲ್ಲಿ 30 ಕೋಟಿ ಪೋಷಕರಿಗೆ ಲಸಿಕೆ ನೀಡಬೇಕು.
ಸದ್ಯ ದೇಶದಲ್ಲಿ ಲಸಿಕೆ ಅಭಾವವಿದೆ. ಪೋಷಕರು ಲಸಿಕೆ ಹಾಕಿಸಿಕೊಳ್ಳಲು ಸಿದ್ಧರಿದ್ದಾರೆ. ಆದ್ರೆ ಲಸಿಕೆ ಕೊರತೆಯಿಂದಾಗಿ ಎರಡನೇ ಡೋಸ್ ಕೂಡ ಸಿಗ್ತಿಲ್ಲ. ಈ ಸಮಸ್ಯೆಗೆ ಮೊದಲು ಪರಿಹಾರ ನೀಡಬೇಕು. ಆಸ್ಪತ್ರೆಯಲ್ಲಿ ಸದ್ಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರು ಕೊರೊನಾ ಲಸಿಕೆಯ ಎರಡು ಡೋಸ್ ಪಡೆದಿಲ್ಲ. ಎರಡು ಡೋಸ್ ಪಡೆದವರಿಗೆ ಕೊರೊನಾ ಸೋಂಕಿನ ಪ್ರಭಾವ ಕಡಿಮೆ ಎಂಬುದು ಇದ್ರಿಂದ ಸ್ಪಷ್ಟವಾಗ್ತಿದೆ.