ಭಾರತ್ ಬಯೋಟೆಕ್ ಕೊರೊನಾ ವಿರುದ್ಧ ಅಭಿವೃದ್ಧಿ ಪಡಿಸಿರುವ ಮತ್ತೊಂದು ಲಸಿಕೆಯಾದ ಇನ್ಸ್ಟ್ರಾನಾಸಲ್ನ ಮೊದಲ ಹಂತದ ಪ್ರಯೋಗ ನಡೆಸಲು ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ ಶಿಫಾರಸು ಮಾಡಿದೆ. ಕೊರೊನಾ ವಿರುದ್ಧದ ಈ ಲಸಿಕೆಯನ್ನ ಮೂಗಿನ ಮೂಲಕ ನೀಡಲಾಗುತ್ತದೆ.
ಹೊಸ ಮಾದರಿಯ ಇನ್ ಸ್ಟ್ರಾನಾಸಲ್ ಲಸಿಕೆಯ ಮೊದಲ ಹಾಗೂ 2ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಕೋರಿ ಡಿಸಿಜಿಐ ಬಳಿ ಭಾರತ್ ಬಯೋಟೆಕ್ ಮನವಿ ಮಾಡಿತ್ತು. ಭಾರತ್ ಬಯೋಟೆಕ್ನ ಈ ಮನವಿಗೆ ಸಮ್ಮತಿ ಸೂಚಿಸಿರುವ ಸಿಡಿಎಸ್ಕೋ ಶಿಫಾರಸು ಮಾಡಿದೆ.
ಕೊರೊನಾಗೆ ಮೂಗಿನ ಮೂಲಕ ಲಸಿಕೆ ನೀಡುವ ಪ್ರಯತ್ನ ನಡೆಯುತ್ತಿದೆ. ಈ ಲಸಿಕೆಯ ಮೊದಲ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಔಷಧಿ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ.
ಈ ಲಸಿಕೆಯೆನಾದರೂ ತನ್ನ ಪ್ರಯೋಗಗಳಲ್ಲಿ ಯಶಸ್ಸನ್ನು ಕಂಡರೆ ಗೇಮ್ ಚೇಂಜರ್ ಆಗಿ ಪಾತ್ರ ನಿರ್ವಹಿಸಲಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಹೇಳಿದ್ದಾರೆ.